ಇಂಚರ ಫೌಂಡೇಶನ್‌ನಿಂದ ಸೈಬರ್ ಸುರಕ್ಷತೆ ಕಾರ್ಯಕ್ರಮ

Update: 2022-07-05 16:55 GMT

ಮಂಗಳೂರು: ಇಂಚರ ಫೌಂಡೇಶನ್‌ನಿಂದ ‘ಸೈಬರ್ ಸ್ಮಾರ್ಟ್’ ಸೈಬರ್ ಸುರಕ್ಷತೆ ಸರಣಿ ಕಾರ್ಯಕ್ರಮವು ಕುಲಶೇಖರದ ಸೇಕ್ರೆಡ್ ಹಾರ್ಟ್ ಮತ್ತು ಸೈಂಟ್ ಜೋಸೆಫ್ ಪ್ರೌಢಶಾಲೆ, ಸೈಂಟ್ ಆನ್ಸ್ ಪ್ರೌಢಶಾಲೆ ಹಾಗೂ ಮಲ್ಲಿಕಟ್ಟೆಯ ಸರಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕೊರೋನ ಕಾಲಘಟ್ಟದ ಈಚೆಗೆ ಮಕ್ಕಳಲ್ಲಿ ಮೊಬೈಲ್ ಬಳಕೆಯು ಅತಿಯಾಗಿದ್ದು ಅದೊಂದು ವ್ಯಸನವಾಗಿ ಮಾರ್ಪಟ್ಟಿದೆ. ಈ ನಿಟ್ಟಿನಲ್ಲಿ ಇಂಚರ ಫೌಂಡೇಶನ್ ಸಂಸ್ಥೆಯು ಡಬ್ಲ್ಯೂಎನ್‌ಎಸ್ ಕೇರ್ಸ್‌ ಫೌಂಡೇಶನ್‌ನ ಸಹಯೋಗದಲ್ಲಿ ಸೈಬರ್ ಸ್ಮಾರ್ಟ್ ಎನ್ನುವ ನೂತನ ಕಾರ್ಯಕ್ರಮದ ಮೂಲಕ ಶಾಲಾ ಮಕ್ಕಳಲ್ಲಿ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸುತ್ತಿದೆ.

ಇಂಚರ ಫೌಂಡೇಶನ್‌ನ ಕಾರ್ಯಕ್ರಮ ವ್ಯವಸ್ಥಾಪಕ ಯೋಗೀಶ್ ಮಲ್ಲಿಗೆಮಾಡು, ಹಿರಿಯ ಕಾರ್ಯಕ್ರಮ ಸಂಯೋಜಕರಾದ ಅಥೀನಾ ಅರಾನ್ಹಾ, ಸುಮನಾ, ಮಿಥ್ಯಾಶ್ರೀ, ವಿಸ್ತರಣಾ ಸಂಯೋಜಕಿ ಸೌಜನ್ಯಾ, ಸಮಾಜ ಕಾರ್ಯ ವಿದ್ಯಾರ್ಥಿಗಳಾದ ಆಗ್ನೇಸ್, ಗೋಪಾಲ್, ಲಾರೆನ್, ಸೌಜನ್ಯಾ, ಚೇತನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಇನ್ನಷ್ಟು ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಇಂಚರ ಫೌಂಡೇಶನ್ ನಿರ್ದೇಶಕ ಪ್ರೀತಂ ರೋಡ್ರಿಗಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News