ಕಾಳಿ ಕುರಿತ ಹೇಳಿಕೆ: ತನ್ನ ಹೇಳಿಕೆ ತಪ್ಪು ಎಂದು ಸಾಬೀತುಪಡಿಸುವಂತೆ ಬಿಜೆಪಿಗೆ ಮಹುವಾ ಸವಾಲು

Update: 2022-07-06 17:16 GMT
ಮಹುವಾ ಮೊಯಿತ್ರಾ (PTI)

ಹೊಸದಿಲ್ಲಿ: ಕಾಳಿ ದೇವಿಯು "ಮಾಂಸ ಭಕ್ಷಣೆ ಮತ್ತು ಮದ್ಯವನ್ನು ಸ್ವೀಕರಿಸುವ ದೇವತೆ" ಎಂಬ ತನ್ನ ಹೇಳಿಕೆಯು ವಿವಾದವಾದ ಬಳಿಕ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಬಿಜೆಪಿಗೆ ತನ್ನ ಹೇಳಿಕೆ ತಪ್ಪು ಎಂದು ಸಾಬೀತುಪಡಿಸುವಂತೆ ಸವಾಲು ಹಾಕಿದ್ದಾರೆ.

ವಿವಾದದ ಕುರಿತು ಎನ್‌ಡಿಟಿವಿ ಜೊತೆ ಮಾತನಾಡಿದ ಮಹುವಾ ಮೊಯಿತ್ರಾ, ನಾನು ಕಾಳಿ ಆರಾಧಕಿ. ನಾನು ಹಿಂದೂ ಧರ್ಮವನ್ನು ಪಾಲಿಸುವವಳು. ನನ್ನ ಸ್ವಂತ ಧರ್ಮದ ಮೇಲೆ ನನ್ನ ಪ್ರತಿಕ್ರಿಯೆ ಇದ್ದವು. ಹಾಗೂ ನೋವು ಮಾಡುವ ಉದ್ದೇಶವಿರಲಿಲ್ಲ" ಎಂದು ತಿಳಿಸಿದ್ದಾರೆ.

“[ಬಿಜೆಪಿಯ] ನೂಪುರ್ ಶರ್ಮಾ ಪ್ರವಾದಿ ಮುಹಮ್ಮದ್ ರನ್ನು ಅವಹೇಳನ ಮಾಡಿದರು. ಆದರೆ, ನಾನು ಕಾಳಿ ದೇವಿಯನ್ನು ಕೊಂಡಾಡುತ್ತೇನೆ. ನಾನು ನನ್ನ ಧರ್ಮದ ಬಗ್ಗೆ ಮಾತನಾಡಲಾಗದ ಭಾರತದಲ್ಲಿ ಬದುಕಲು ಬಯಸುವುದಿಲ್ಲ” ಎಂದು ಹೇಳಿದ್ದಾರೆ.

“ನನ್ನ ತಪ್ಪು ಸಾಬೀತುಪಡಿಸಲು ನಾನು ಬಿಜೆಪಿಗೆ ಸವಾಲು ಹಾಕುತ್ತೇನೆ; ಕಾಳಿ ದೇವಿಯನ್ನು ಈ ರೀತಿ ಪೂಜಿಸಲಾಗುತ್ತಿಲ್ಲ ಎಂದು ನಿರೂಪಿಸಿ ತೋರಿಸಿ” ಎಂದು ಅವರು ಸವಾಲು ಹಾಕಿದ್ದಾರೆ.

ನನ್ನ ಧರ್ಮದ ಮೇಲೆ ಬಿಜೆಪಿಯು ಏಕತ್ವ, ಪಿತೃಪ್ರಧಾನ, ಬ್ರಾಹ್ಮಣ ಮತ್ತು ಉತ್ತರ ಭಾರತದ ಕಲ್ಪನೆಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News