'ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗಿಲ್ಲ' ಎಂದು 23ಲಕ್ಷ ರೂ.ಗೂ ಹೆಚ್ಚು ವೇತನವನ್ನು ಹಿಂತಿರುಗಿಸಿದ ಪ್ರೊಫೆಸರ್

Update: 2022-07-07 10:37 GMT

ಹೊಸದಿಲ್ಲಿ: ಬಿಹಾರದ ಮುಝಪ್ಫರಪುರ್‍ನ ನಿತಿಶೇಶ್ವರ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಲಲನ್ ಕುಮಾರ್ (33) ಅವರು ತಾವು ಸೆಪ್ಟೆಂಬರ್ 2019ರಲ್ಲಿ ಕೆಲಸಕ್ಕೆ ಸೇರಿದಂದಿನಿಂದ ಇಲ್ಲಿಯ ತನಕದ ಅವರ ವೇತನ- ಸುಮಾರು ರೂ 24 ಲಕ್ಷ ಅನ್ನು  ಕಾಲೇಜು ಸಂಯೋಜಿತವಾಗಿರುವ ಬಿ ಆರ್ ಅಂಬೇಡ್ಕರ್ ವಿವಿಯ ರಿಜಿಸ್ಟ್ರಾರ್ ಅವರಿಗೆ ಚೆಕ್ ಮೂಲಕ ಹಸ್ತಾಂತರಿಸಿದ್ದಾರೆ. ಕುಮಾರ್ ಅವರ ಚೆಕ್ ಮೊತ್ತ ರೂ 23,82,228 ಆಗಿದೆ. ಅವರು ಹೀಗೆ ಮಾಡಲು ಕಾರಣ ಅವರು ಸೇವೆಗೆ ಸೇರಿದಂದಿನಿಂದ ಕಳೆದ 33 ತಿಂಗಳುಗಳಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ತರಗತಿಗೆ ಹಾಜರಾಗಿಲ್ಲ. ಹೀಗಿರುವಾಗ ತಾವು ಯಾವುದೇ ಕೆಲಸ ಮಾಡದೇ ಇರುವಾಗ ವೇತನ ಪಡೆದುಕೊಳ್ಳಲು ಅವರ ಆತ್ಮಸಾಕ್ಷಿ ಅವರನ್ನು ಕೇಳಿಲ್ಲ.

ಕೋವಿಡ್ ಸಾಂಕ್ರಾಮಿಕ ಸಂದರ್ಭ ಕೂಡ ಆನ್‍ಲೈನ್ ತರಗತಿಗಳ ವೇಳೆ ಹಿಂದಿ ತರಗತಿಗಳಿಗೆ ಕೆಲವೇ ಕೆಲವು ವಿದ್ಯಾರ್ಥಿಗಳು ಹಾಜರಾಗಿದ್ದರು. ನಾನು ಮಾಡದ ಕೆಲಸಕ್ಕಾಗಿ ಐದು ವರ್ಷದ ವೇತನ ಸ್ವೀಕರಿಸಿದರೆ ಅದು ನನಗೆ ಶೈಕ್ಷಣಿಕ ಸಾವು ಇದ್ದಂತೆ ಎಂದು ಅವರು ಹೇಳಿದ್ದಾರೆ.

ಪ್ರೊಫೆಸರ್ ಕ್ರಮವನ್ನು ವಿವಿಯ ಕುಲಸಚಿವ ಆರ್ ಕೆ ಠಾಕುರ್ ಶ್ಲಾಘಿಸಿದ್ದರೆ ಕಾಲೇಜಿನ ಪ್ರಾಂಶುಪಾಲ ಮನೋಜ್ ಕುಮಾರ್ ಪ್ರತಿಕ್ರಿಯಿಸಿ ``ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂಬುದಕ್ಕೆ ಮಾತ್ರವಲ್ಲ, ಬದಲು ಸ್ನಾತ್ತಕೋತ್ತರ ವಿಭಾಗಕ್ಕೆ ವರ್ಗಾವಣೆ ಪಡೆಯುವ ತಂತ್ರ ಇದು,''ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News