ಲಂಚ ಪ್ರಕರಣ: ಪವರ್‌ ಗ್ರಿಡ್‌ ಕಾರ್ಪರೇಷನ್‌, ಟಾಟಾ ಪ್ರಾಜೆಕ್ಟ್ಸ್‌ನ 5 ಅಧಿಕಾರಿಗಳನ್ನು ಬಂಧಿಸಿದ ಸಿಬಿಐ

Update: 2022-07-07 12:57 GMT

 ಹೊಸದಿಲ್ಲಿ: ಪವರ್‌ ಗ್ರಿಡ್‌ ಕಾರ್ಪೊರೇಷನ್‌ ಇದರ ಕಾರ್ಯನಿರ್ವಾಹಕ ನಿರ್ದೇಶಕ ಬಿ ಎಸ್‌ ಝಾ ಹಾಗೂ ಟಾಟಾ ಪ್ರಾಜೆಕ್ಟ್ಸ್‌ ಲಿಮಿಟೆಡ್‌ ಇದರ ಐದು ಮಂದಿ ಅಧಿಕಾರಿಗಳನ್ನು ಲಂಚದ ಪ್ರಕರಣದಲ್ಲಿ ಸಿಬಿಐ ಇಂದು ಬಂಧಿಸಿದೆ. ಈ ಪ್ರಕರಣ ಸಂಬಂಧ ದೇಶಾದ್ಯಂತ 11 ಕಡೆಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ಕೈಗೆತ್ತಿಕೊಂಡಿದೆ.

ಪವರ್‌ ಗ್ರಿಡ್‌ ಕಾರ್ಪೊರೇಷನ್‌ನ ಬಿ ಎಸ್‌ ಝಾ ಅವರಿಗೆ ಲಂಚ ನೀಡುವಾಗ ಟಾಟಾ ಪ್ರಾಜೆಕ್ಟ್ಸ್‌ನ ಕೆಲ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆನ್ನಲಾಗಿದೆ. ಝಾ ನಿವಾಸದಿಂದ ಸಿಬಿಐ ಅಧಿಕಾರಿಗಳು ರೂ 93 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಬಂಧಿತ ಇತರರಲ್ಲಿ ಟಾಟಾ ಪ್ರಾಜೆಕ್ಟ್ಸ್‌ ಕಾರ್ಯನಿರ್ವಾಹಕ ಉಪಾಧ್ಯಕ್ಷ ದೇಸರಾಜ್‌ ಪಾಠಕ್‌ ಮತ್ತು ಸಹಾಯಕ ಉಪಾಧ್ಯಕ್ಷ ಆರ್‌ ಎಸ್‌ ಸಿಂಗ್‌ ಸೇರಿದ್ದಾರೆ.

ʻʻಕಂಪೆನಿಯು ಪವರ್‌ ಗ್ರಿಡ್‌ ಕಾರ್ಪೊರೇಷನ್‌ನಿಂದ  ನಾರ್ತ್‌ ಈಸ್ಟರ್ನ್‌ ರೀಜನ್‌ ಪವರ್‌ ಸಿಸ್ಟಂ ಇಂಪ್ರೂವ್ಮೆಂಟ್ ಪ್ರಾಜೆಕ್ಟ್‌ ಮತ್ತು ಕಾಂಪ್ರಹೆನ್ಸಿವ್‌ ಸ್ಕೀಮ್‌ ಫಾರ್‌ ಅರುಣಾಚಲ ಪ್ರದೇಶ್‌ ಎಂಡ್‌ ಸಿಕ್ಕಿಂ ಯೋಜನೆಗಳ ಟೆಂಡರ್‌ ಪಡೆದುಕೊಂಡಿದೆ,ʼʼಎಂದು ಸಿಬಿಐ ವಕ್ತಾರರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News