ಹಿಂದೂಗಳ 'ಶಿರಚ್ಛೇದನ'ಕ್ಕೆ ಕರೆ ನೀಡಿದ ಮುಸ್ಲಿಮರ ಮಾಹಿತಿಯನ್ನು ಎನ್‌ಐಎ ಕೇಳಿದೆಯೇ?

Update: 2022-07-07 15:13 GMT

ಹೊಸದಿಲ್ಲಿ: ನೂಪುರ್‌ ಶರ್ಮ ಹೇಳಿಕೆ ಸಂಬಂಧಿಸಿದಂತೆ ಹಿಂದೂಗಳ ಶಿರಚ್ಛೇದನ ಮಾಡಲು ಕರೆ ನೀಡಿದವರ ಮಾಹಿತಿ ನೀಡಿ ಎಂದು ಜನರನ್ನು ಎನ್‌ಐಎ ಕೇಳಿಕೊಂಡಿದೆ ಎಂದು ವೈರಲ್‌ ಆಗಿರುವ ಸಂದೇಶದ ಕುರಿತು ಸ್ವತಃ ಎನ್‌ಐಎ ಪ್ರತಿಕ್ರಿಯಿಸಿದೆ. ತಾನು ಅಂತಹ ಯಾವುದೇ ಸಂದೇಶವನ್ನು ನೀಡಿಲ್ಲ, ಇಂತಹ ಸಂದೇಶಗಳು "ಸಾರ್ವಜನಿಕರನ್ನು ದಾರಿತಪ್ಪಿಸುವ ಕುಚೇಷ್ಟೆಯ" ಭಾಗವಾಗಿದೆ ಎಂದು ಅದು ಹೇಳಿದೆ ಎಂದು indianexpress.com ವರದಿ ಮಾಡಿದೆ. 

ಫೇಸ್‌ಬುಕ್‌ ಅಥವಾ ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂಗಳ ಶಿರಚ್ಛೇದನಕ್ಕೆಕರೆ ನೀಡಿರುವ ಮುಸ್ಲಿಮರ ಅಥವಾ ಮುಸ್ಲಿಂ ಸಂಘಟನೆಗಳ ಮಾಹಿತಿ ನೀಡಿ ಎಂದು ಎನ್‌ಐಎ ಸಹಾಯವಾಣಿಯನ್ನು ರಚಿಸಿದೆ ಎಂದು ಹೇಳಲಾದ ಸಂದೇಶವನ್ನು ನೂಪುರ್‌ ಶರ್ಮಾ ವಿವಾದ ಭುಗಿಲೆದ್ದ ಬಳಿಕ ಹರಿಯಬಿಡಲಾಗಿತ್ತು. ಸಾರ್ವಜನಿಕ ಮಾಧ್ಯಮಗಳಲ್ಲಿ ನೀಡಿರುವ ಸಂಖ್ಯೆಗಳು ಇಸ್ಲಾಮಿಕ್ ಸಂಘಟನೆಗಳ ಚಟುವಟಿಕೆಗಳ ಬಗ್ಗೆ ವರದಿ ಮಾಡಲು ಮತ್ತು ನೂಪುರ್ ಶರ್ಮಾ ವಿವಾದಕ್ಕೆ ಸಂಬಂಧಿಸಿದಂತೆ ಅಲ್ಲ ಎಂದು ಕೇಂದ್ರ ಸಂಸ್ಥೆ ಹೇಳಿದೆ.

 “ಎನ್‌ಐಎ ನೀಡಿದ ಸಂದೇಶ ಎಂದು ಕೆಲವು ತಪ್ಪು ಸಂದೇಶಗಳನ್ನು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಎನ್ಐಎ ಅಂತಹ ಯಾವುದೇ ಸಂದೇಶವನ್ನು ನೀಡಿಲ್ಲ ಎಂದು ಎಲ್ಲರಿಗೂ ಈ ಮೂಲಕ ತಿಳಿಸಲಾಗಿದೆ. ಇಂತಹ ಸಂದೇಶಗಳು ಸಂಪೂರ್ಣವಾಗಿ ನಕಲಿ ಮತ್ತು ದುರುದ್ದೇಶಪೂರಿತವಾಗಿವೆ ಮತ್ತು ಸಾರ್ವಜನಿಕರನ್ನು ದಾರಿತಪ್ಪಿಸುವ ಕುಚೇಷ್ಟೆಯ ಭಾಗವಾಗಿದೆ” ಎಂದು ಎನ್ಐಎ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News