BECIL Recruitment 2022: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Update: 2022-07-08 15:14 GMT

ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯನ್ ಲಿಮಿಟೆಡ್ (BECIL) ಕನ್ಸಲ್ಟೆಂಟ್, ಮಲ್ಟಿ ಟಾಸ್ಕಿಂಗ್ ಸ್ಟಾಫ್, ಡೇಟಾ ಎಂಟ್ರಿ ಆಪರೇಟರ್‌ಗಳು, ಸಲಹೆಗಾರರು ಮತ್ತು ಇತರ ಹುದ್ದೆಗಳಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.

 ಅರ್ಜಿ ಪ್ರಕ್ರಿಯೆಯು ನಡೆಯುತ್ತಿದೆ ಮತ್ತು ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ ಜುಲೈ 14 ಆಗಿದೆ. ಅಭ್ಯರ್ಥಿಗಳು BECIL ನ ಅಧಿಕೃತ ವೆಬ್‌ಸೈಟ್ becil.com ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

 BECIL ನೇಮಕಾತಿ 2022 ರ ಹುದ್ದೆಯ ವಿವರಗಳು: 19 ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿಯನ್ನು ನಡೆಸಲಾಗುತ್ತಿದೆ. ಅದರಲ್ಲಿ 3 ಹುದ್ದೆಗಳು ಸೀನಿಯರ್ ಕನ್ಸಲ್ಟೆಂಟ್ (ಪ್ರಾಜೆಕ್ಟ್) ಹುದ್ದೆಗೆ, 3 ಹುದ್ದೆಗಳು ಸೀನಿಯರ್ ಸಲಹೆಗಾರರು/ಸಮಾಲೋಚಕರ ಹುದ್ದೆಗೆ (ವಿಮಾನಯಾನ), 2  ಖಾಲಿ ಹುದ್ದೆಗಳು ಸಲಹೆಗಾರರು/ಸಮಾಲೋಚಕರ (MIS) ಹುದ್ದೆಗೆ, 1 ಖಾಲಿ ಕನ್ಸಲ್ಟೆಂಟ್ (ಹಣಕಾಸು) ಹುದ್ದೆಗೆ, 1 ಖಾಲಿ ಕನ್ಸಲ್ಟೆಂಟ್ (ಎಂಜಿನಿಯರಿಂಗ್ ಸೇವೆಗಳು), 2 ಖಾಲಿ ಕನ್ಸಲ್ಟೆಂಟ್ ಹುದ್ದೆಗೆ (ಹಣಕಾಸು), 2  ಹುದ್ದೆಗಳು ಜೂನಿಯರ್ ಎಕ್ಸಿಕ್ಯೂಟಿವ್/ ಎಕ್ಸಿಕ್ಯುಟಿವ್ ಅಸಿಸ್ಟೆಂಟ್ ಗೆ, ಡೇಟಾ ಎಂಟ್ರಿ ಆಪರೇಟರ್‌ಗಳ ಹುದ್ದೆಗೆ 2, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಗಳಿಗೆ 3 ಹುದ್ದೆಗಳಿವೆ.

 BECIL ನೇಮಕಾತಿ 2022 ಅರ್ಜಿ ಶುಲ್ಕ: ಸಾಮಾನ್ಯ/OBC/ಮಾಜಿ ಸೈನಿಕ/ಮಹಿಳಾ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ₹750 ಪಾವತಿಸಬೇಕು, ಆದರೆ SC/ST/EWS/PH ವರ್ಗಕ್ಕೆ ಅರ್ಜಿ ಶುಲ್ಕ ₹450 ಇದೆ.

 BECIL ನೇಮಕಾತಿ 2022: ಅರ್ಜಿ ಸಲ್ಲಿಸುವುದು ಹೇಗೆ ?

 becilregistration.com ನ BECIL ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

 ಮುಂದೆ, ಹೊಸ ನೋಂದಣಿಯ ಮೇಲೆ ಕ್ಲಿಕ್ ಮಾಡಿ ಮತ್ತು ನೋಂದಣಿ ಪ್ರಕ್ರಿಯೆಯೊಂದಿಗೆ ಮುಂದುವರಿಯಿರಿ

 ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಿ

 ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, ಶುಲ್ಕವನ್ನು ಪಾವತಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ

 ಮುಂದಿನ ಅವಶ್ಯಕತೆಗಾಗಿ ಅದರ ಹಾರ್ಡ್ ಕಾಪಿಯನ್ನು ಇರಿಸಿಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News