×
Ad

ಬಂಟ್ವಾಳ: ಏರಿಕೆಯಾಗುತ್ತಿದೆ ನೇತ್ರಾವತಿ ನದಿ ನೀರಿನ ಮಟ್ಟ!

Update: 2022-07-10 00:00 IST

ಬಂಟ್ವಾಳ, ಜು.9: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನೇತ್ರಾವತಿ ನದಿಯಲ್ಲಿ ಶನಿವಾರ ನೀರಿನ ಮಟ್ಟ ಏರಿಕೆಯಾಗುತ್ತಿದ್ದು ರಾತ್ರಿ 11 ಗಂಟೆಯ ವೇಳೆಗೆ ನೀರಿನ ಮಟ್ಟ 7.7 ಮೀಟರ್ ಗೆ ಏರಿಕೆಯಾಗಿದೆ.

ಬೆಳಗ್ಗೆ 8 ಗಂಟೆಗೆ ನದಿಯಲ್ಲಿ ನೀರಿನ ಮಟ್ಟ 6.1 ಮೀಟರ್ ಇದ್ದರೆ, ಮಧ್ಯಾಹ್ನ 2 ಗಂಟೆಯ ವೇಳೆಗೆ 6.8 ಮೀಟರ್ ಗೆ ಏರಿಕೆಯಾಗಿತ್ತು. 

ಸಂಜೆ 6 ಗಂಟೆಗೆ ನೀರಿನ ಮಟ್ಟ 7.3 ಮೀಟರ್ ಗೆ ತಲುಪಿದರೆ ರಾತ್ರಿ 11 ಗಂಟೆಯ ವೇಳೆಗೆ 7.7 ಮೀಟರ್ ಗೆ ಏರಿಕೆಯಾಗಿದೆ. 

ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ 8.5 ಮೀಟರ್ ಅಪಾಯದ ಮಟ್ಟವಾಗಿದ್ದು ಬೆಳಗ್ಗೆಯಿಂದ ನಿಧಾನವಾಗಿ ಏರಿಕೆಯಾಗುತ್ತಿದೆ. 

ಬಂಟ್ವಾಳ ಕಂದಾಯ ಅಧಿಕಾರಿಗಳು ನೀರಿನ ಏರಿಕೆಯ ಮೇಲೆ ನಿಗಾ ಇಟ್ಟಿದ್ದು ನದಿ ಪಾತ್ರದ ತಗ್ಗು ಪ್ರದೇಶಗಳ ಜನರಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News