×
Ad

ಕೊಲಂಬೊ: ರಾಷ್ಟ್ರಪತಿ ಭವನದ ಹೆಚ್ಚಿನ ಭದ್ರತೆಯ ಬಂಕರ್ ಪತ್ತೆ ಹಚ್ಚಿದ ಪ್ರತಿಭಟನಾಕಾರರು

Update: 2022-07-10 13:39 IST
Photo:twitter

ಹೊಸದಿಲ್ಲಿ: ಕೊಲಂಬೊದಲ್ಲಿರುವ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ಅಧಿಕೃತ ನಿವಾಸವನ್ನು ಅತಿಕ್ರಮಿಸಿದ ಪ್ರತಿಭಟನಾಕಾರರು ಕಾಂಪೌಂಡ್‌ನಲ್ಲಿ ಹೆಚ್ಚಿನ ಭದ್ರತಾ ಬಂಕರ್ ಅನ್ನು ಪತ್ತೆ ಮಾಡಿದರು ಎಂದು NDTV ವರದಿ ಮಾಡಿದೆ.

ಆಕ್ರೋಶಿತ  ಪ್ರತಿಭಟನಾಕಾರರು ಅಧ್ಯಕ್ಷರ ಅರಮನೆಯ ಕಾಂಪೌಂಡ್ ಹಾಗೂ  ಅವರ ಕಚೇರಿಯನ್ನು ಆಕ್ರಮಿಸುವ ಸ್ವಲ್ಪ ಸಮಯದ ಮೊದಲು ರಾಜಪಕ್ಸೆ ಶನಿವಾರ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದ್ದರು.

ಅಭೂತಪೂರ್ವ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ದ್ವೀಪ ರಾಷ್ಟ್ರದ ಅಧ್ಯಕ್ಷರ ಭವನದ ಸುತ್ತಲಿನ ಬೀದಿಗಳಲ್ಲಿ ಲಕ್ಷಾಂತರ ಪ್ರತಿಭಟನಾಕಾರರು ಜಮಾಯಿಸಿದ್ದರು. ರಾಜಪಕ್ಸೆ ಅವರ ರಾಜೀನಾಮೆಗೆ ಒತ್ತಾಯಿಸಿದರು.

ಅರಮನೆಯ ದ್ವಾರಗಳನ್ನು ಮುತ್ತಿಗೆ ಹಾಕಿದ ನಂತರ, ಪ್ರತಿಭಟನಾಕಾರರು ರಾಜಪಕ್ಸೆ ಅವರ ನಿವಾಸಕ್ಕೆ ನುಗ್ಗಿದರು ಕೆಲವರು ರಾಜಪಕ್ಸೆ ಅವರ ಮಲಗುವ ಕೋಣೆಗೆ ನುಗ್ಗಿದರೆ , ಕೆಲವರು ಕಾಂಪೌಂಡ್‌ನಲ್ಲಿರುವ ಈಜುಕೊಳಕ್ಕೆ ಹಾರುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಅನೇಕರು ಅಧ್ಯಕ್ಷರ ಲಿವಿಂಗ್ ರೂಮಿನಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಂಡುಬಂದಿತು

ಈ ಎಲ್ಲ ಬಿಕ್ಕಟ್ಟಿನ ಮಧ್ಯೆ, ರಾಜಪಕ್ಸೆ ಎಲ್ಲಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ.

ಅಧ್ಯಕ್ಷರು  ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಅವರೊಂದಿಗೆ ಮಾತ್ರ ಸಂಪರ್ಕದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News