×
Ad

ಪಂಜಿಕಲ್ಲಿನಲ್ಲಿ ಮತ್ತೆ ಕುಸಿದ ಗುಡ್ಡ: ಪ್ರಾಣಾಪಾಯದಿಂದ ಪಾರಾದ ನಾಲ್ವರು ಯುವಕರು!

Update: 2022-07-11 11:58 IST

ಬಂಟ್ವಾಳ, ಜು.11: ನಾಲ್ಕು ದಿನಗಳ ಹಿಂದೆ ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ ತಾಲೂಕಿನ ಪಂಜಿಕಲ್ಲು ಗ್ರಾಮದ ಮುಕ್ಕುಡದಲ್ಲಿ ಮತ್ತೆ ಅದೇ ಗುಡ್ಡ ಕುಸಿದಿದ್ದು ನಾಲ್ವರು ಯುವಕರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗುಡ್ಡ ಮತ್ತಷ್ಟು ಕುಸಿಯುವ ಭೀತಿ ಬಗ್ಗೆ ಅಧಿಕಾರಿಗಳು ಈ ಹಿಂದೆಯೇ ಎಚ್ಚರಿಕೆ ನೀಡಿದ್ದರೂ ಅದನ್ನು ಲೆಕ್ಕಿಸದೆ ದುರಂತ ನಡೆದ ಸ್ಥಳದ ವೀಕ್ಷಣೆಗೆಂದು ಸ್ಥಳೀಯರು ಹಾಗೂ ದೂರ ದೂರ ಊರಿನಿಂದ ಜನರು ನಿರಂತರವಾಗಿ ಆಗಮಿಸುತ್ತಿದ್ದಾರೆ. 

ರವಿವಾರ ಸಂಜೆ ದುರಂತ ನಡೆದ ಸ್ಥಳದ ವೀಕ್ಷಣೆಗೆ ಬೊಲೆರೊ ಕಾರಿನಲ್ಲಿ ಆಗಮಿಸಿದ ನಾಲ್ವರು ಯುವಕರು ತುಂಬಾ ಹೊತ್ತು ಅಲ್ಲಿ ಕಾಲ ಕಳೆದಿದ್ದು ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ನಾಲ್ವರನ್ನು ಗದರಿಸಿ, ಸ್ಥಳದಿಂದ ತೆರಳುವಂತೆ ಸೂಚಿಸಿದ್ದಾರೆ.

ನಾಲ್ವರು ಸ್ಥಳದಿಂದ ತಮ್ಮ ವಾಹನದತ್ತ ತೆರಳುತ್ತಿದ್ದಂತೆಯೇ ಗುಡ್ಡ ಕುಸಿದು ಅವರು ನಿಂತಿದ್ದ ಸ್ಥಳಕ್ಕೆ ಮಣ್ಣು ಆವರಿಸಿದ್ದು ಸ್ವಲ್ಪದರಲ್ಲೇ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News