ಸೂರಿಕುಮೇರಿನಲ್ಲಿ ಗುಡ್ಡ ಕುಸಿತ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ
Update: 2022-07-11 12:34 IST
ಬಂಟ್ವಾಳ, ಜು.11: ತಾಲೂಕಿನ ಸೂರಿಕುಮೇರು ಎಂಬಲ್ಲಿ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ವಾಹನ ಸಂಚಾರ ಸ್ಥಗಿತಗೊಂಡ ಘಟನೆ ಸೋಮವಾರ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ಬದಿ ಅಗೆದಿದ್ದ ಗುಡ್ಡ ಕುಸಿತಗೊಂಡು ಮಣ್ಣು ರಾಷ್ಟ್ರೀಯ ಹೆದ್ದಾರಿಗೆ ಬಿದ್ದಿದೆ. ಇದರಿಂದ ವಾಹನಗಳ ಸಂಚಾರ ಕೆಲವು ಹೊತ್ತು ಸ್ಥಗಿತಗೊಂಡವು.
ಯಂತ್ರದ ಮೂಲಕ ರಸ್ತೆಯಿಂದ ಮಣ್ಣು ತೆರವುಗೊಳಿಸಲಾಗಿದ್ದು ವಾಹನ ಸಂಚಾರ ಮತ್ತೆ ಆರಂಭವಾಗಿದೆ.