ಪುತ್ತೂರು; ವಿದ್ಯುತ್ ಸ್ಪರ್ಶ: ಮೆಸ್ಕಾಂ ಪವರ್ ಮ್ಯಾನ್ ಮೃತ್ಯು
Update: 2022-07-12 19:49 IST
ಪುತ್ತೂರು: ಮರದ ಕೊಂಬೆ ಕಡಿಯುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶ ಉಂಟಾಗಿ ಮೆಸ್ಕಾಂ ಪವರ್ ಮ್ಯಾನ್ ಒಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಒಳಮೊಗ್ರು ಗ್ರಾಮದ ಕುಂಬ್ರ ಎಂಬಲ್ಲಿ ಮಂಗಳವಾರ ನಡೆದಿದೆ.
ಮೆಸ್ಕಾಂ ಕುಂಬ್ರ ಶಾಖೆಯ ಪವರ್ ಮ್ಯಾನ್ ಮೂಲತ: ಬಾಗಲಕೋಟೆ ನಿವಾಸಿ, 6 ವರ್ಷಗಳಿಂದ ಪುತ್ತೂರಿನಲ್ಲಿ ಮೆಸ್ಕಾಂ ಪವರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬಸವರಾಜ್ (26) ಮೃತರು ಎಂದು ಗುರುತಿಸಲಾಗಿದೆ.
ಬಸವರಾಜ್ ಅವರು ಮರದ ಕೊಂಬೆಯನ್ನು ಕಬ್ಬಿಣದ ಕೊಕ್ಕೆಯಲ್ಲಿ ತುಂಡರಿಸುತ್ತಿದ್ದ ವೇಳೆಯಲ್ಲಿ ವಿದ್ಯುತ್ ಸ್ಪರ್ಷಗೊಂಡು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಪುತ್ತುರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.