×
Ad

ಮಂಗಳೂರು: ಸಿಟಿ ಸೆಂಟರ್ ಕಾರ್ನಿವಲ್‌ಗೆ ಚಾಲನೆ

Update: 2022-07-14 21:54 IST

ಮಂಗಳೂರು, ಜು.14: ರಾಜ್ಯದ 5ನೇ ಬೃಹತ್ ಮಾಲ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮೊಹ್ತಿಶಾಂ ಕಾಂಪ್ಲೆಕ್ಸ್‌ನ ಸಿಟಿ ಸೆಂಟರ್ ಮಾಲ್‌ನ 12ನೇ ವರ್ಷಾಚರಣೆ ಪ್ರಯುಕ್ತ ‘ಸಿಟಿ ಸೆಂಟರ್ ಕಾರ್ನಿವಲ್’ಗೆ ಗುರುವಾರ ಮಾಲ್‌ನಲ್ಲಿ ಸಂಭ್ರಮದ ಚಾಲನೆ ದೊರೆಯಿತು.

ಅತಿಥಿಯಾಗಿ ಭಾಗವಹಿಸಿದ ಮೊಹ್ತಿಶಾಂ ಕಾಂಪ್ಲೆಕ್ಸ್ ಪ್ರೈವೇಟ್ ಲಿ.ನ ಸ್ಥಾಪಕ ಸದಸ್ಯ ಮೊಹ್ತಿಶಾಂ ಅಬ್ದುಲ್ ಬಾರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮತ್ತೋರ್ವ ಅತಿಥಿ ನಟ ರೂಪೇಶ್ ಶೆಟ್ಟಿ ಮಾತನಾಡಿ, ಸಿಟಿ ಸೆಂಟರ್ ಮಾಲ್ ಜೊತೆ ಮಂಗಳೂರಿನ ಜನರಿಗೆ ಭಾವನಾತ್ಮಕ ಸಂಬಂಧ ಇದೆ. ಇಲ್ಲಿನ ಗ್ರಾಹಕರಿಗೆ ಮಾಲ್ ಬಗ್ಗೆ ಪರಿಚಯ ಮಾಡಿದ ಸಂಸ್ಥೆ ಸಿಟಿ ಸೆಂಟರ್. ದೇಶ ವಿದೇಶಗಳ ಬ್ರಾಂಡ್‌ಗಳ ಸಾಮಾಗ್ರಿಗಳು ಈ ಮಾಲ್ ಮೂಲಕ ಒಂದೆ ಕಡೆ ಗ್ರಾಹಕರಿಗೆ ದೊರೆಯುವಂತೆ ಆಗಿದೆ. ಅಲ್ಲದೆ ಚಲನ ಚಿತ್ರದ ಬೆಳವಣಿಗೆ ಹಾಗೂ ಕಲಾವಿದರಿಗೆ ಸಿಟಿ ಸೆಂಟರ್ ಪ್ರೋತ್ಸಾಹ ನೀಡಿದೆ ಎಂದರು.

ಚಲನ ಚಿತ್ರ ನಟ ವಿನೀತ್, ನಟಿ ರಚನಾ ರೈ ಶುಭ ಹಾರೈಸಿದರು.

ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಕಲಾವಿದರು, ಚಲನಚಿತ್ರ ನಟರು, ಗ್ರಾಹಕರು ಹಾಗೂ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿದರು.

ಮೊಹ್ತಿಶಾಂ ಕಾಂಪ್ಲೆಕ್ಸ್ ಪ್ರೈವೇಟ್ ಲಿ.ನ ಆಡಳಿತ ನಿರ್ದೇಶಕ ಎಸ್.ಎಂ.ಅರ್ಶದ್, ನಿರ್ದೇಶಕ ಎಸ್.ಎಂ.ಸವೂದ್ ಹಾಗೂ ಸಿಇಒ ಧರ್ಮರಾಜ್ ಅತಿಥಿಗಳನ್ನು ಸ್ವಾಗತಿಸಿದರು. ಸಾಹಿಲ್ ಝಾಹಿರ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಕಲಾ ತಂಡದ ಸದಸ್ಯರು ತಮ್ಮ ಕಾರ್ಯಕ್ರಮಗಳ ಮೂಲಕ ವರ್ಷಾಚರಣೆಯ ಸಂಭ್ರಮಕ್ಕೆ ಮೆರುಗು ನೀಡಿದರು.

ಸಿಟಿ ಸೆಂಟರ್ ಕಾರ್ನಿವಲ್ ಜು.14ರಿಂದ ಆಗಸ್ಟ್ 15ರವರೆಗೆ ನಡೆಯಲಿದೆ. ಗ್ರಾಹಕರು ಹೆಚ್ಚು ಶಾಪಿಂಗ್ ಮಾಡುವ ಮೂಲಕ ಪ್ರತಿದಿನ ಅತ್ಯಾಕರ್ಷಕ ಬಹುಮಾನ ಗೆಲ್ಲುವ ಅವಕಾಶವಿದ್ದು, ಬಂಪರ್ ಬಹುಮಾನವಾಗಿ ಕಾರು, ಬೈಕ್ ಹಾಗೂ ಸ್ಕೂಟರ್ ಅನ್ನು ಗೆಲ್ಲಬಹುದಾಗಿದೆ. ಅಲ್ಲದೆ ವಾರಾಂತ್ಯದಲ್ಲಿ ನಡೆಯುವ ಡ್ರಾದಲ್ಲಿ ಹೋಂ ಸೆಂಟರ್‌ನಿಂದ ಸೋಫಾ ಸೆಟ್, ಕ್ಲಬ್ ಮಹೇಂದ್ರದಿಂದ ಹಾಲಿಡೇ ವೊಚರ್ಸ್‌ ಮತ್ತು ಐ ಫೋನ್ ಗೆಲ್ಲುವ ಸುವರ್ಣಾವಕಾಶವಿದೆ. ಅಲ್ಲದೆ ವಾರಾಂತ್ಯದಲ್ಲಿ ಮಕ್ಕಳು ಹಾಗೂ ದೊಡ್ಡವರಿಂದ ವಿವಿಧ ಕಲಾ ಪ್ರದರ್ಶನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News