ಈಕ್ವೆಡಾರ್ ನಲ್ಲಿ 5.8 ತೀವ್ರತೆಯ ಭೂಕಂಪ

Update: 2022-07-15 02:25 GMT
Photo: PTI

ಈಕ್ವೆಡಾರ್: ಈಕ್ವೆಡಾರ್ ನಲ್ಲಿ  ಗುರುವಾರ ರಾತ್ರಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯೂರೋಪಿಯನ್ ಮೆಡಿಟರೇನಿಯನ್ ಸಿಸ್ಮೊಲಾಜಿಕಲ್ ಸೆಂಟರ್ (ಇಎಂಎಸ್‍ಸಿ) ಹೇಳಿದೆ.

ಸುಮಾರು 80 ಕಿಲೋಮಿಟರ್ (49.71 ಮೈಲು) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಇಎಂಎಸ್‍ಸಿ ಹೇಳಿದೆ.

ಭೂಕಂಪದಿಂದಾಗಿ ಸುನಾಮಿ ಭೀತಿ ಇಲ್ಲ ಎಂದು ಅಮೆರಿಕದ ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆ ಸ್ಪಷ್ಟಪಡಿಸಿದೆ. ಈಕ್ವೆಡಾರ್ ನ ಪ್ರೊವಿನ್ಸಿಯಾ ಡೆಲ್ ಗುಯಸ್ ಎಂಬಲ್ಲಿ ಭೂಕಂಪ ಸಂಭವಿಸಿದೆ.

ಬಬಾಹೊಯೊ ಪಟ್ಟಣದಿಂದ ಆಗ್ನೇಯಕ್ಕೆ 32 ಕಿಲೋಮೀಟರ್ ದೂರದಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ 5.8ರಷ್ಟಿತ್ತು ಎಂದು ವಾಲ್ಕೆನೊಡಿಸ್‍ಕವರಿ.ಕಾಮ್ ವರದಿ ಮಾಡಿದೆ. ಇದರ ಜತೆ ಕಡಿಮೆ ತೀವ್ರತೆಯ ಕಂಪನಗಳು ಮೊಂಟಲ್ವೊ ಹಾಗೂ ನರಂಜಿತೊ ಎಂಬಲ್ಲಿ ಸಂಭವಿಸಿದ್ದಾಗಿ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News