×
Ad

ಕಣಚೂರು ಕಾಲೇಜು ಆಫ್ ನರ್ಸಿಂಗ್ ಸೈನ್ಸ್; ಬಿ ಎಸ್ ಸಿ ವಿದ್ಯಾರ್ಥಿಗಳ ʼದೀಪ ಪ್ರಜ್ವಲನಾʼ ಸಮಾರಂಭ

Update: 2022-07-16 14:06 IST

ದೇರಳಕಟ್ಟೆ: ಕಣಚೂರು ಕಾಲೇಜು ಆಫ್ ನರ್ಸಿಂಗ್ ಸೈನ್ಸ್ ಇದರ ಆರನೇ ಬ್ಯಾಚ್ ಬಿ ಎಸ್ ಸಿ ವಿದ್ಯಾರ್ಥಿಗಳ ದೀಪ ಪ್ರಜ್ವಲನಾ ಸಮಾರಂಭವು ಕಣಚೂರು ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದಲ್ಲಿ ಶನಿವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಆರ್ ವಿ ಕಾಲೇಜು ನರ್ಸಿಂಗ್ ಬೆಂಗಳೂರು ಇದರ ಪ್ರಾಂಶುಪಾಲ ‌ಡಾ. ಎಸ್ ಆರ್ ಗಜೇಂದ್ರ ಸಿಂಗ್ ಮಾತನಾಡಿ, ರಾಜ್ಯದಲ್ಲಿ  ಹಲವು ನರ್ಸಿಂಗ್ ಕಾಲೇಜು ಕಾರ್ಯಾಚರಿಸುತ್ತಿದೆ .ನರ್ಸಿಂಗ್ ಕೋರ್ಸ್ ಪಡೆಯುವವರಿಗೆ ಉತ್ತಮ ಅಧ್ಯಯನ ಅಗತ್ಯ ಇದೆ. ಉತ್ತಮ ಜ್ಞಾನ ಇದ್ದರೆ ನರ್ಸಿಂಗ್ ದೊಡ್ಡ ಹೊರೆ ಆಗುವುದಿಲ್ಲ. ಶಿಕ್ಷಣ ಸಂಸ್ಥೆ ಬಹಳಷ್ಟು ಇದ್ದರೂ ಎಲ್ಲಾ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತುಂಬಿದೆ. ಅದೇ ಹಂತದಲ್ಲಿ ಕೋರ್ಸ್ ಬೆಳೆಯಬೇಕು. ಅದಕ್ಕಾಗಿ ಉತ್ತೇಜನ ನೀಡಬೇಕು. ರೊಗಿಗಳನ್ನು ನೋಡಿದಾಗ ರೋಗಿಯ ಸಮಸ್ಯೆ ನಮಗೆ ಅರ್ಥವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಕಣಚೂರು ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ನಿರ್ದೆಶಕ ಅಬ್ದುಲ್ ರಹಿಮಾನ್ ಮಾತನಾಡಿ,  ಶಿಕ್ಷಣ ಪಡೆಯುವುದು ನಮ್ಮ  ಜವಾಬ್ದಾರಿ ಎಂದು ಅರಿಯಬೇಕಿದೆ. ಕೇರಳ, ಕರ್ನಾಟಕ ವಿಭಾಗದ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ, ಕೋರ್ಸ್ ಗಳ ಮಹತ್ವದ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಉತ್ತಮ ಶಿಕ್ಷಕ ರು ಇದ್ದಾರೆ.  ಪ್ರಾಯೋಗಿಕವಾಗಿ ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ವ್ಯವಸ್ಥೆ ಇದೆ. ಉತ್ತಮ  ಅಧ್ಯಯನ ಮಾಡಿದರೆ ಮಾತ್ರ ನರ್ಸಿಂಗ್ ಕೋರ್ಸ್ ಪೂರ್ಣ ಗೊಳಿಸಲು ಸಾಧ್ಯ. ಸಮಯ ವ್ಯರ್ಥ ಮಾಡದೆ ಶಿಕ್ಷಣ ಕಡೆ ಒತ್ತು ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಣಚೂರು ನರ್ಸೀಂಗ್ ಸೈನ್ಸ್ ಕಾಲೇಜು ಪ್ರಿನ್ಸಿಪಾಲ್ ಮೋಲಿ ಸಲ್ದಾನ  ವಿದ್ಯಾರ್ಥಿಗಳಿಗೆ ಪ್ರತಿಜ್ಞೆ  ಮಾಡಿಸಿದರು. ಈ ವೇಳೆ ವಿದ್ಯಾರ್ಥಿಗಳು ದೀಪ ಪ್ರಜ್ವಲಿಸಿ ಸಂಭ್ರಮಿಸಿದರು. ಕಾರ್ಯಕ್ರಮ ದಲ್ಲಿ ಡಾ.ಹರೀಶ್ ಶೆಟ್ಟಿ,ಶೈಲಾ ಶ್ರೀಧರ್ ಉಪಸ್ಥಿತರಿದ್ದರು. ರಿಟಾ ಶಾಲಿನಿ ಕಾರ್ಯಕ್ರಮ ನಿರೂಪಿಸಿದರು. ಶೆರೆಂಜ್ ಜೋಸೆಫ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News