×
Ad

ಮಾಂಸಾಹಾರ ಸೇವನೆ: ಕನ್ವಾರ್ ಯಾತ್ರೆಯ ದಾರಿಯಲ್ಲಿರುವ ಕಮ್ಮಾರರ ತೆರವಿಗೆ ದಿಲ್ಲಿ ಪೊಲೀಸರಿಗೆ ಸೂಚನೆ

Update: 2022-07-16 23:10 IST
ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ, ಜು. 16: ಕನ್ವಾರ್ ಯಾತ್ರಿಗಳು ಸಾಗುವ ದಾರಿಯಲ್ಲಿರುವ ಕಮ್ಮಾರರು ಮಾಂಸಹಾರ ಸೇವಿಸುತ್ತಿರುವುದರಿಂದ ಹಾಗೂ ಎಲುಬುಗಳನ್ನು ಎಸೆಯುತ್ತಿರುವುದರಿಂದ ಅವರನ್ನು ತೆರವುಗೊಳಿಸುವಂತೆ ದಿಲ್ಲಿ ಪೊಲೀಸ್‌ನ ವಿಶೇಷ ದಳ ಸಲಹೆ ನೀಡಿದೆ.  

ಕನ್ವಾರ್ ಯಾತ್ರೆಯ ದಾರಿಯ ನಕ್ಷೆ ರೂಪಿಸುವಂತೆ ದಿಲ್ಲಿ ಪೊಲೀಸ್‌ನ ವಿಶೇಷ ದಳ ಜಿಲ್ಲಾ ಪೊಲೀಸ್‌ಗೆ ನಿರ್ದೇಶನ ನೀಡಿದೆ. 

‘‘ಸರಿಯಾದ ವಿಲೇವಾರಿ ವ್ಯವಸ್ಥೆ ಲಭ್ಯವಿಲ್ಲದ ಕಾರಣ ಕಮ್ಮಾರರು ಎಲುಬುಗಳನ್ನು ಎಸೆಯುತ್ತಾರೆ ಹಾಗೂ ಇದರಿಂದ ಪವಿತ್ರ ಯಾತ್ರೆಗೆ ತೆರಳುವ ಕನ್ವಾರ್ ಯಾತ್ರಿಗಳಿಗೆ ಸಮಸ್ಯೆ ಉಂಟಾಗುತ್ತದೆ’’ ಎಂದು ಅನಾಮಿಕ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
ಈ ವರ್ಷ ಕನ್ವಾರ್ ಯಾತ್ರೆಯನ್ನು ಜುಲೈ 14ರಿಂದ 26ರ ವರೆಗೆ ನಡಸಲಾಗುತ್ತದೆ. ಕೊರೋನ ಸಾಂಕ್ರಾಮಿಕ ರೋಗದ ಕಾರಣದಿಂದ ಎರಡು ವರ್ಷಗಳ ಬಳಿಕ ಕನ್ವಾರ್ ಯಾತ್ರೆಯನ್ನು ಆಯೋಜಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News