×
Ad

ಬಂಟ್ವಾಳ; ಕ್ಷುಲ್ಲಕ ವಿಚಾರ: ಮಹಿಳೆಗೆ ಚೂರಿ ಇರಿತ

Update: 2022-07-17 10:42 IST

ಬಂಟ್ವಾಳ; ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಮಹಿಳೆಯೋರ್ವರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಬಂಟ್ವಾಳದ ಪಿಲಿಮೊಗರು ಗ್ರಾಮದಲ್ಲಿ ನಡೆದಿದೆ.

ಪಿಲಿಮೊಗರು ನಿವಾಸಿ ಉಮೇಶ್ ಎಂಬವರ ಪತ್ನಿ ಲತಾ ಗಾಯಗೊಂಡವರು.

ಲತಾ ಅವರ ಮೇಲೆ‌ ಸಂಬಂಧಿಕನೇ ಆಗಿರುವ ರಮೇಶ್ ಎಂಬಾತ ಚೂರಿಯಿಂದ ಇರಿದು ಗಾಯಗೊಳಿಸಿ ಪರಾರಿಯಾಗಿದ್ದು, ಗಾಯಗೊಂಡಿರುವ ಲತಾ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಲ್ಲಿಪಾಡಿ ನಿವಾಸಿ‌ ಆರೋಪಿ ರಮೇಶ್, ಲತಾ ಅವರ ಮನೆಗೆ ಕೆಲವೊಮ್ಮೆ ಬಂದು ಹೋಗುತ್ತಿದ್ದ. ಲತಾ ಅವರಿಗೆ ಮದುವೆ ಆಗಿದ್ದು, ರಮೇಶ್ ಕುಟುಂಬಸ್ಥ ಆದ ಕಾರಣ ಲತಾ ರಮೇಶ್ ಜೊತೆ ಸಲುಗೆಯಿಂದಿದ್ದರು ಎನ್ನಲಾಗಿದೆ. ರಮೇಶ್ ಲತಾಗೆ ಮೆಸೇಜ್ ಮಾಡುತ್ತಿದ್ದು, ಆದರೆ ರಮೇಶ್ ವರ್ತನೆ ಮೀರಿದಾಗ ಲತಾ ಮೆಸೇಜ್ ಮಾಡುವುದನ್ನು ನಿಲ್ಲಿಸಿ ಎಚ್ಚರಿಕೆ ಕೊಟ್ಟಿದ್ದಾರೆ. ಇದರಿಂದ ಕೋಪಗೊಂಡು ಮನೆಗೆ ಬಂದು ಕೊಲೆ ಮಾಡುವ ಯತ್ನದಿಂದ ಹಲ್ಲೆ ನಡೆಸಿರುವುದಾಗಿ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಪೊಲೀಸರು‌ ಆರೋಪಿಯ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News