×
Ad

ಕೊಡವೂರು: ‘ಬದ್ಕೆರೆ ಬುಡ್ಲೆ ಪ್ಲೀಸ್’ ನಾಟಕ ಮೂಹರ್ತ

Update: 2022-07-17 19:15 IST

ಉಡುಪಿ : ಸುಮನಸಾ ಕೊಡವೂರು ಉಡುಪಿ ಇದರ ನೂತನ ತುಳು ಸಾಮಾಜಿಕ ನಾಟಕ ‘ಬದ್ಕೆರೆ ಬುಡ್ಲೆ ಪ್ಲೀಸ್’ ಇದರ ಮುಹುರ್ತವೂ ಕೊಡವೂರು ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ ರವಿವಾರ ಜರಗಿತು.

ದೇವಳದ ಅರ್ಚಕ, ವ್ಯವಸ್ಥಾಪನ ಸಮಿತಿಯ ಸದಸ್ಯ ಪ್ರಸಾದ್ ಭಟ್ ಪ್ರಾರ್ಥನೆ ಸಲ್ಲಿಸುವ ಮೂಹುರ್ತ ಮೂಲಕ ನೇರವೇರಿಸಿದರು. ಬದ್ಕೆರೆಬುಡ್ಲೆ ಪ್ಲೀಸ್ ನಾಟಕದ ನಿರ್ದೇಶಕ ಹಾಗೂ ರಚನೆಕಾರ ನಾಗರಾಜ್ ವರ್ಕಾಡಿ  ಕೃತಿ ಯನ್ನು ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ನಾಟಕಕಾರ ರವಿಕುಮಾರ್ ಕಡೆಕಾರ್, ಜರ್ನಾದನ್ ಕೊಡವೂರು, ಸುಮನಸಾದ ಗೌರವಾಧ್ಯಕ್ಷ ಎಂ.ಎಸ್.ಭಟ್, ಸಂಚಾಲಕ ಭಾಸ್ಕರ್ ಪಾಲನ್ ಬಾಚನಬೈಲು, ಪದಾಧಿಕಾರಿಗಳಾದ ವಿನಯ್ ಕುಮಾರ್ ಕಲ್ಮಾಡಿ, ಯೋಗೀಶ್ ಕೊಳಲಗಿರಿ, ಮನೋಹರ್ ಕಲ್ಮಾಡಿ, ಚಂದ್ರಕಾಅತ್ ಕುಂದರ್, ನೂತನ್ ಕುಮಾರ್, ದಿವಾಕರ್ ಕಟೀಲ್, ಹರೀಶ್ ಕಲ್ಯಾಣಪುರ, ಸುಮನಸಾದ ಸದಸ್ಯರು ಹಾಗೂ ಕಲಾವಿದರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News