×
Ad

ಉಡುಪಿ ಜಿಲ್ಲೆಯ ಎಂಟು ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ

Update: 2022-07-17 20:25 IST

ಉಡುಪಿ : ರವಿವಾರ ಜಿಲ್ಲೆಯ ಎಂಟು ಮಂದಿ ಹೊಸದಾಗಿ ಕೋವಿಡ್‌ಗೆ ಪಾಸಿಟಿವ್ ಬಂದಿದ್ದಾರೆ. ಇಂದು ಒಬ್ಬರು ಮಾತ್ರ ಸೋಂಕಿನಿಂದ ಚೇತರಿಸಿಕೊಳ್ಳುವ ಮೂಲಕ ಸದ್ಯ ಜಿಲ್ಲೆಯಲ್ಲಿರುವ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 32ಕ್ಕೇರಿದೆ.

ಇಂದು ಪರೀಕ್ಷೆಗೊಳಗಾದ 240 ಮಂದಿಯಲ್ಲಿ ಪಾಸಿಟಿವ್ ಎಂಟರಲ್ಲಿ ಏಳು ಮಂದಿ ಪುರುಷರಾದರೆ ಒಬ್ಬರು ಮಾತ್ರ ಮಹಿಳೆ. ಸೋಂಕು ಪತ್ತೆಯಾದ ಎಲ್ಲಾ ಎಂಟು ಮಂದಿಯೂ ಉಡುಪಿ ತಾಲೂಕಿನವರು. ಇವರಲ್ಲಿ ಒಬ್ಬರು ಚಿಕಿತ್ಸೆ ಗಾಗಿ ಕೋವಿಡ್ ಆಸ್ಪತ್ರೆಗೆ ದಾಖಲಾದರೆ ಉಳಿದ ಏಳು ಮಂದಿಯೂ ಅವರವರ ಮನೆಗಳಲ್ಲಿದ್ದು ಚಿಕಿತ್ಸೆ ಪಡೆಯುತಿದ್ದಾರೆ.

ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿರುವ 32 ಮಂದಿಯಲ್ಲಿ ನಾಲ್ವರು ಆಸ್ಪತ್ರೆಗಳ ಲ್ಲಿದ್ದಾರೆ. ಇಬ್ಬರು ಜನರಲ್ ವಾರ್ಡ್‌ನಲ್ಲಿ ಹಾಗೂ ಇಬ್ಬರು ವೆಂಟಿಲೇಟರ್ ನಲ್ಲಿದ್ದಾರೆ. ಇಂದು  ಉಡುಪಿ ತಾಲೂಕಿನ 176, ಕುಂದಾಪುರ ತಾಲೂಕಿನ 38  ಹಾಗೂ ಕಾರ್ಕಳ ತಾಲೂಕಿನ 26 ಮಂದಿಯನ್ನು ಕೋವಿಡ್‌ಗಾಗಿ ಪರೀಕ್ಷೆಗೊಳ ಪಡಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News