​ಮಣಿಪಾಲ: ಮಾಧವಿ- ಕಥನ ಕಾವ್ಯ ಕೃತಿ ಅನಾವರಣ

Update: 2022-07-18 12:19 GMT

ಮಣಿಪಾಲ, ಜು.18: ಮಣಿಪಾಲ್ ಯೂನಿವರ್ಸಲ್ ಪ್ರೆಸ್ ಪ್ರಕಟಿಸಿರುವ ಸಾಹಿತಿ ಪಾರ್ವತಿ ಜಿ. ಐತಾಳ್ ಅವರ ಅನುವಾದಿತ ಕೃತಿ ಮಾಧವಿ-ಕಥನ ಕಾವ್ಯವನ್ನು ಮಣಿಪಾಲ ಮಾಹೆಯ ಬೇಸಿಕ್ ಸಾಯನ್ಸ್ ಬಿಲ್ಡಿಂಗ್‌ನ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ನಡೆದ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.

ಕೃತಿ ಅನಾವರಣಗೊಳಿಸಿದ ಲೇಖಕಿ ಸುಧಾ ಆಡುಕಳ ಮಾತನಾಡಿ, ಮಹಾ ಭಾರತದ ಉಪಕಥೆಯಲ್ಲಿ ಬರುವ ಮಾಧವಿ ಪಾತ್ರಕ್ಕೆ ವಿಶೇಷ ಮಹತ್ತ್ವವಿಲ್ಲ. ಆದರೆ, ಭಾರತೀಯ ಆಧುನಿಕ ಸಾಹಿತ್ಯ ಪರಂಪರೆಯಲ್ಲಿ ಮಾಧವಿಯನ್ನು ಮರುಕಥನದ ಮೂಲಕ ನಿರೂಪಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತ ಬಂದಿದೆ. ಪ್ರಸ್ತುತ ಮಾಧವಿ- ಕಥನಕಾವ್ಯ ಅಂಥ ಮಹತ್ತ್ವದ ಪ್ರಯತ್ನಗಳಲ್ಲಿ ಒಂದು ಎಂದರು.

ಸಂಗೀತ-ಸಾಹಿತ್ಯ ವಿದ್ವಾಂಸ ಅರವಿಂದ ಹೆಬ್ಬಾರ್ ಕೃತಿ ಪರಿಚಯ ಮಾಡಿದರು. ಅಧ್ಯಕ್ಷತೆಯನ್ನು ಮಣಿಪಾಲ್ ಯೂನಿವರ್ಸಲ್ ಪ್ರೆಸ್‌ನ ನೀತಾ ಇನಾಂದಾರ್ ವಹಿಸಿದ್ದರು. ಮಣಿಪಾಲ್ ಯೂನಿವರ್ಸಲ್ ಪ್ರೆಸ್ ಮಾರುಕಟ್ಟೆ ವ್ಯವಸ್ಥಾಪಕಿ ರೇವತಿ ನಾಡಗೀರ್ ಕಾರ್ಯಕ್ರಮ ಸಂಯೋಜಿಸಿದರು. ಆರಂಭ ದಲ್ಲಿ ಚಿನ್ಮಯಿ ಮದ್ಲಾಪುರ್ ಮತ್ತು ಬಳಗದವರು ಭಾವಗೀತೆಗಳನ್ನು ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News