×
Ad

ಉಡುಪಿ: ನಿಟ್ಟೂರು ಶಾಲಾ ಆವರಣದಲ್ಲಿ ವನಮೋತ್ಸವ ಕಾರ್ಯಕ್ರಮ

Update: 2022-07-18 17:54 IST

ಉಡುಪಿ, ಜು.18: ಜಿಸಿಐ ಕಲ್ಯಾಣಪುರ, ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಉಡುಪಿ ವಲಯ ಮತ್ತು ರೋಟರಿ ಕ್ಲಬ್ ಉಡುಪಿ ರಾಯಲ್ ಸಂಯುಕ್ತ ಆಶ್ರಯದಲ್ಲಿ ರವಿವಾರ ನಿಟ್ಟೂರು ಶಾಲಾ ಆವರಣದಲ್ಲಿ ವನಮೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪರಿಸರವಾದಿ ಮತ್ತು ರೋಟರಿ ಕ್ಲಬ್ ಉಡುಪಿ ರಾಯಲ್ ಅಧ್ಯಕ್ಷ ಡಾ. ಬಾಲಕೃಷ್ಣ ಮದ್ದೋಡಿ ಮಾತನಾಡಿ, ಪ್ರಕೃತಿಯಲ್ಲಿ ನಾವು ಕಾಣುವ ಜೀವನ ಚಕ್ರವನ್ನು ನಮ್ಮ ಪೂರ್ವಜರು ಉಳಿಸಿ ಬೆಳೆಸಿದ್ದಾರೆ. ಆದ್ದರಿಂದ ಅದನ್ನು ಮತ್ತಷ್ಟು ಕೊಂಡೊಯ್ಯುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪರಿಸರವಾದಿ ನಿತ್ಯಾನಂದ ಅವರನ್ನು ಸನ್ಮಾನಿಸಲಾಯಿತು. ವಲಯ ಸಂಯೋಜಕಿ ಪೂರ್ಣಿಮಾ ಕೊಡವೂರು, ಲಕ್ಷ್ಮೀ ಶೆಟ್ಟಿ, ಜೆಸಿಐ ಕಲ್ಯಾಣಪುರದ ಸ್ಥಾಪಕಧ್ಯಕ್ಷ ಜಗದೀಶ್ ಕೆಮ್ಮಣ್ಣು, ಪೂರ್ವಾಧ್ಯಕ್ಷ ಅರುಣ್ ಕುಮಾರ್, ಕಾರ್ಯದರ್ಶಿ ಅನುಸೂಯ, ಪದ್ಮನಾಭ, ಗುಣವರ್ಮ, ಗಣಪತಿ, ಛಾಯಾಗ್ರಾಹಕರಾದ ಪ್ರವೀಣ್ ಕೊರೆಯ, ಸುರಭಿ ಸುಧೀರ್ ಶೆಟ್ಟಿ, ದಿವಾಕರ್ ಹಿರಿಯಡ್ಕ, ಮಿತ್ರ ಕುಮಾರ್, ಪ್ರವೀಣ್ ಹೂಡೆ, ನಾರಾಯಣ್ ಜತ್ತನ್, ಸಂತೋಷ್ ಕೊರಂಗ್ರಪಾಡಿ, ಪ್ರಕಾಶ್ ಕೊಡಂಕೂರು, ಸುಕೇಶ್ ಅಮೀನ್, ಸಂದೀಪ್ ಕಾಮತ್, ಎಂ.ಎಸ್.ಮಂಜು, ಸತೀಶ್ ಶೇರಿಗಾರ್, ಸುಶಾಂತ್ ಕೆರೆಮಠ ವಸಂತ್ ಕುಮಾರ್ ಉಪಸ್ಥಿತರಿದ್ದರು.

ಜೆಸಿಐ ಅಧ್ಯಕ್ಷೆ ಜಯಶ್ರೀ ಮಿತ್ರ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕ ಸೀಮಾ ಕಾರ್ಯಕ್ರಮ ಸಂಯೋಜಿಸಿದರು. ಸೌತ್ ಕೆನರಾ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಉಡುಪಿ ವಲಯಾಧ್ಯಕ್ಷ ಜನಾರ್ದನ್ ಕೊಡವೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News