ಕೃಷ್ಣಾಪುರ ಚೈತನ್ಯ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಐಎಎಸ್ ಪ್ರೇರಣಾ ತರಬೇತಿ ಕಾರ್ಯಕ್ರಮ

Update: 2022-07-18 14:18 GMT

ಮಂಗಳೂರು: ಆಡಳಿತಾತ್ಮಕ ಸೇವೆಯಲ್ಲಿ ತೊಡಗಿಸಿಕೊಳ್ಳಲು, ನಮ್ಮ ಮಕ್ಕಳಿಗೆ ಎಳವಯಸ್ಸಲ್ಲಿ ಪ್ರೇರಣೆ ನೀಡಿ ಅವರನ್ನು ಸಜ್ಜುಗೊಳಿಸಬೇಕಾಗಿದೆ. ಹಾಗೆ ಆದಲ್ಲಿ ಮಾತ್ರ ನಮ್ಮ ಜಿಲ್ಲೆಯಿಂದ ಸಾಕಷ್ಟು ಮಂದಿ ಅಧಿಕಾರಿಗಳು ಹುಟ್ಟಿಕೊಳ್ಳಬಹುದು ಎಂದು ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ(MEIF)ದ ಅಧ್ಯಕ್ಷ ಮೂಸಬ್ಬ ತಿಳಿಸಿದರು.

ಅವರು ಕೃಷ್ಣಾಪುರ ಚೈತನ್ಯ ಪಬ್ಲಿಕ್ ಶಾಲೆ ಆಯೋಜಿಸಿದ ಐಎಎಸ್/ಐಪಿಎಸ್ ಪುನಶ್ಚೇತನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೀಫ್ ಚೈತನ್ಯ ಪಬ್ಲಿಕ್ ಶಾಲೆ ಹಾಗೂ ಎ.ಇ. ಐ.ಎ.ಎಸ್ ಅಕಾಡಮಿ ವತಿಯಿಂದ ಹೈಸ್ಕೂಲ್ ಮಕ್ಕಳಿಗೆ ಪರೀಕ್ಷೆಗಳನ್ನು ಎದುರಿಸಲು ಪ್ರೇರಣೆ ನೀಡುವ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಚೈತನ್ಯ ಶಾಲೆ ಅಧ್ಯಕ್ಷ ಕೆ.ಎ. ಖಾದರ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ "Issues &Concern" ಸಂಪಾದಕ ಜಯರಾಮ್ ಶ್ರೀಯಾನ್ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜತೆಗೆ ಅವರ ಭವಿಷ್ಯವನ್ನು ರೂಪಿಸಿದ ಸಂಸ್ಥೆಗಳನ್ನು ಅವರು ಶ್ಲಾಘಿಸಿದರು.

ಎಸಿಇ ಅಕಾಡಮಿಯ ನಿರ್ದೇಶಕ ನಝೀರ್ ಹುಸೈನ್, ಮೀಫ್ ಪ್ರದಾನ ಕಾರ್ಯದರ್ಶಿ ಬಿ.ಎ. ನ‍‌ಝೀರ್, ಸಕಾ೯ರಿ ನೌಕರರ ಸಂಘದ ಮಾಜಿ ಸಂಘಟನಾ ಕಾರ್ಯದರ್ಶಿ ಸಮದ್‌ ಮಾಸ್ಟರ್, ಚೈತನ್ಯ ಸಂಚಾಲಕರಾದ ಎಂ.ಎ.ಹನೀಫ್, ಮುಖ್ಯೋಪಾದ್ಯಾಯಿನಿ ಶ್ರೀಮತಿ ಶಶಿಕಲಾ, ಮೀಫ್ ನ ಪದಾಧಿಕಾರಿಗಳಾದ ಪಿ.ಎ. ಇಲ್ಯಾಸ್, ಇಕ್ಬಾಲ್ ಕೃಷ್ಣಾಪುರ, ಶಾಲಾ ಆಡಳಿತ ಮಂಡಳಿ ಸದಸ್ಯ ಮೈಯ್ಯದ್ದಿ ಸುಪ್ರೀಂ ಮುಂತಾದವರು ಉಪಸ್ಥಿತರಿದ್ದರು.

ಬೆಂಗಳೂರಿನ ಸಯ್ಯದ್ ಹಂಶಿ ವಿದ್ಯಾರ್ಥಿಗಳಿಗೆ ಪ್ರೇರಣಾ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಶಾಲಾ ಸಂಚಾಲಕರಾದ ಎಂ.ಎ.ಹನೀಫ್‌ರವರು ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಶಿಕಲಾ ವಂದಿಸಿದರು. ಶಿಕ್ಷಕಿ ಸುಜಾತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News