ಉಡುಪಿ: 9 ಮಳೆಹಾನಿ ಪ್ರಕರಣಗಳಲ್ಲಿ 2.75 ಲಕ್ಷ ರೂ.ನಷ್ಟ
ಉಡುಪಿ : ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ೯ ಮಳೆ ಹಾನಿ ಪ್ರಕರಣಗಳು ವರದಿಯಾಗಿದ್ದು, ಇವುಗಳಿಂದ ಒಟ್ಟು ೨.೭೫ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ. ಜಿಲ್ಲೆಯಲ್ಲಿ ಸದ್ಯ ಮಳೆ ದುರ್ಬಲಗೊಂಡಿದೆ.
ಬೈಂದೂರು ತಾಲೂಕಿನ ನಾವುಂದ ಗ್ರಾಮದಲ್ಲಿ ಶೇಖರ ದೇವಾಡಿಗ ಎಂಬವರ ಮನೆ ಮಳೆಯಿಂದ ಭಾಗಶ: ಹಾನಿಗೊಂಡಿದ್ದು ೬೦ ಸಾವಿರ ರೂ., ಅದೇ ಗ್ರಾಮದ ಗೋವಿಂದ ಎಂಬವರ ಮನೆಗೆ 55 ಸಾವಿರ ರೂ., ಹಡವು ಗ್ರಾಮದ ಶಂಕರ ಪೂಜಾರಿ ಎಂಬವರ ಮನೆಗೆ ಮೇಲೆ ಮರಬಿದ್ದು 46 ಸಾವಿರ ರೂ.ಹಾಗೂ ಹಳ್ಳಿಹೊಳೆ ಗ್ರಾಮದ ಅಣ್ಣಪ್ಪ ಹಸಲ ಅವರ ಜಾನುವಾರು ಕೊಟ್ಟಿಗೆ ಮಳೆಯಿಂದ ಭಾಗಶ: ಹಾನಿಗೊಂಡಿದ್ದು ೨೦ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಉಡುಪಿ ತಾಲೂಕಿನ ಬೆಳ್ಳರಪಾಡಿ ಗ್ರಾಮದ ಪ್ರಭಾಕರ ಶೆಟ್ಟಿ ಮನೆಗೆ ೧೮,೦೦೦ರೂ. ಅಂಜಾರು ಗ್ರಾಮದ ದಿನೇಶ ನಾಯ್ಕರ ಮನೆಯ ಸಿಮೆಂಟ್ ಶೀಟ್ ಗಾಳಿಗೆ ಹಾರಿಹೋಗಿ ೨೫ ಸಾವಿರ ರೂ.ನಷ್ಟ ಉಂಟಾಗಿದೆ.
ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕರುಣಾಕರ ಎಂಬವರ ಮನೆಯ ಸಿಮೆಂಟ್ ಶೀಟ್ ಗಾಳಿಗೆ ಹಾರಿಹೋಗಿ ೨೦ ಸಾವಿರ ರೂ., ಮುಡಾರುಗ್ರಾಮದ ಯಶೋದ ಪೂಜಾರ್ತಿ ಎಂಬವರ ಮನೆ ಮೇಲೆ ಮರಬಿದ್ದು ೧೮ಸಾವಿರ ರೂ. ಹಾಗೂ ಮಿಯಾರು ಗ್ರಾಮದ ಯಶೋದ ಅವರು ಮನೆ ಮೇರೆ ಮರಬಿದ್ದು ೧೫ ಸಾವಿರ ರೂ.ನಷ್ಟ ಉಂಟಾಗಿದೆ. ಅಲ್ಲದೇ ಮುಡಾರು ಗ್ರಾಮದ ಸತೀಶ್ ಪೂಜಾರಿ ಎಂಬವರ ಗದ್ದೆಯಲ್ಲಿ ನೀರು ನಿಂತು ೧೫ಸಾವಿರ ರೂ.ಬೆಳೆ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ.