×
Ad

ಚಾರ್ಮಾಡಿ ಘಾಟ್ ನಲ್ಲಿ ಕೆಟ್ಟುನಿಂತ ಇಂಧನ ತುಂಬಿದ ಟ್ಯಾಂಕರ್; ವಾಹನ ಪ್ರಯಾಣಿಕರ ಪರದಾಟ

Update: 2022-07-20 07:59 IST

ಬೆಳ್ತಂಗಡಿ: ಚಾರ್ಮಾಡಿ ಘಾಟ್ 10ನೇ ತಿರುವಿನಲ್ಲಿ ಇಂಧನ ತುಂಬಿದ ಟ್ಯಾಂಕರ್ ತಾಂತ್ರಿಕ ದೋಷದಿಂದ ಮಾರ್ಗ ಮಧ್ಯೆ ಮಂಗಳವಾರ ರಾತ್ರಿ 8:30ಕ್ಕೆ ನಿಂತ ಪರಿಣಾಮ ರಾತ್ರಿ ಬೆಂಗಳೂರು ಮತ್ತಿತರ ಕಡೆ ಸಂಚರಿಸುವ ನೂರಾರು ಬಸ್ ಗಳು ಸಾಲು ಗಟ್ಟಿ ನಿಂತಿದ್ದವು.‌

ಬೆಳ್ತಂಗಡಿ ಹೊಯ್ಸಳಕ್ಕೆ ಬಂದ ದೂರಿನಂತೆ ಕರ್ತವ್ಯ ನಿರತ ಪಿಎಸ್ ವೆಂಕಪ್ಪ ಮತ್ತು ಬಸವರಾಜ್ ಸ್ಥಳಕ್ಕೆ ಹೋಗಿ ಕೊಟ್ಟಿಗೆಹಾರ ಮತ್ತು ಚಾರ್ಮಾಡಿ ಯಲ್ಲಿ ಇತರ ವಾಹನಗಳನ್ನು ನಿಯಂತ್ರಿಸಿ ಬಸ್ ಗಳ ಸಂಚಾರಕ್ಕೆ ಅನುವುಮಾಡಿಕೊಟ್ಟರು. ನಂತರ ಸ್ಥಳಕ್ಕಾಗಮಿಸಿದ ಬೆಳ್ತಂಗಡಿ ಸಂಚಾರ ಠಾಣೆ ಪಿಎಸ್ಐ ಓಡಿಯಪ್ಪ ಶಿವರಾಮ ರೈ ಕುಮಾರ್ ಕ್ರೇನ್ ತರಿಸಿ ಟ್ಯಾಂಕರ್ ನ್ನು ತೆರವುಗೊಳಿಸಿ ಬೆಳಗ್ಗೆ 5 ಗಂಟೆಗೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News