ಪಾಣೆಮಂಗಳೂರು | ರಸ್ತೆ ಬದಿ ಕಮರಿಗೆ ಉರುಳಿದ ಕಾರು: ಚಾಲಕ ಪಾರು
Update: 2022-07-20 11:40 IST
ಬಂಟ್ವಾಳ, ಜು.20: ನಿದ್ದೆಯ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಗೆ ಉರುಳಿ ಬಿದ್ದ ಘಟನೆ ತಾಲೂಕಿನ ಪಾಣೆಮಂಗಳೂರಿನಲ್ಲಿ ಇಂದು ಮುಂಜಾನೆ ನಡೆದಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ತಾಲೂಕಿನ ನರಿಕೊಂಬು ನಿವಾಸಿ ಕುಶಾಂತ್ ಎಂಬವರು ಕಾರು ಚಲಾಯಿಸುತ್ತಿದ್ದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರಿನಲ್ಲಿ ರಸ್ತೆ ಬದಿಗೆ ಕಾರು ಉರುಳಿ ಬಿದ್ದಿದೆ. ಕುಶಾಂತ್ ಜನರೇಟರ್ ಮ್ಯಾಕಾನಿಕ್ ಕೆಲಸಗಾರನಾಗಿದ್ದು, ಉಡುಪಿಯಲ್ಲಿ ಜನರೇಟರ್ ರಿಪೇರಿ ಮುಗಿಸಿ ಬುಧವಾರ ಮುಂಜಾವ 2:30ರ ವೇಳೆಗೆ ಮನೆಗೆ ಬರುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.
ಇಂದು ಬೆಳಗ್ಗೆ ಕಾರನ್ನು ಕ್ರೇನ್ ಬಳಸಿ ಮೇಲಕ್ಕೆತ್ತಲಾಗಿದೆ.