×
Ad

ಮಿತ್ತೂರು : ಕೆ.ಜಿ.ಎನ್ ನಲ್ಲಿ ಕಲಾ ಮಹೋತ್ಸವ

Update: 2022-07-22 10:44 IST

ವಿಟ್ಲ : ದಾರುಲ್ ಇರ್ಶಾದ್ ಅಧೀನ ಸಂಸ್ಥೆಯಾದ ಕೆ.ಜಿ.ಎನ್. ದಅವಾ ಕಾಲೇಜು ಮಿತ್ತೂರು ಇದರ ವಿದ್ಯಾರ್ಥಿ ಸಂಘಟನೆ ಮುಈನುಸ್ಸುನ್ನ ಸ್ಟೂಡೆಂಟ್ ಅಸೋಸಿಯೇಷನ್ ಹಮ್ಮಿಕೊಂಡ ಮಾಸಿಕ ಕಲಾ ಮಹೋತ್ಸವ ಇತ್ತೀಚೆಗೆ ಕೆ.ಜಿ.ಎನ್ ಕ್ಯಾಂಪಸ್ ನಲ್ಲಿ ನಡೆಯಿತು.

ದಅವಾ ಕಾಲೇಜು ಮುದರ್ರಿಸ್ ಅಬ್ದುಲ್ಲತೀಫ್ ಸಅದಿ, ಸಾಬಿತ್ ಸಖಾಫಿ, ಹನೀಫ್ ಅಝ್‌ಹರಿ, ಮಶೂದ್ ಸಖಾಫಿ, ಸ್ವಾದಿಖ್ ಮುಈನಿ ಗಡಿಯಾರ್, ಅಬ್ದುರ್ರಹ್ಮಾನ್ ಅಮಾನಿ, ಶಾಹುಲ್ ಹಮೀದ್ ಅದನಿ, ಸಮದ್ ಮುಈನಿ ಹಾಗೂ ಸಿದ್ದೀಕ್ ಹಾಜಿ ಕಬಕ ಮತ್ತಿತರು ಉಪಸ್ಥಿತರಿದ್ದರು.

ಕಲಾ ಸ್ಪರ್ಧೆಯಲ್ಲಿ  ಫಝಲ್ ಕಬಕ ನೇತೃತ್ವದ ಟೀಂ ಗ್ರೇಟರ್ ತಂಡ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿತು. ಸಯ್ಯಿದ್ ಖುಬೈಬ್ ಸ್ವಾಗತಿಸಿ, ಸಲಾಂ ವಂದಿಸಿದರು. ಅಮ್ಮಾರ್ ನೀರಕಟ್ಟೆ, ಹುಸೈನ್ ಶಾಹಿನ್  ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News