ಸಿಬಿಎಸ್ ಇ 10 ನೇ ತರಗತಿಯ ಫಲಿತಾಂಶ ಪ್ರಕಟ

Update: 2022-07-22 09:21 GMT
Photo:PTI

ಹೊಸದಿಲ್ಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, ಸಿಬಿಎಸ್ ಇ  10 ನೇ ತರಗತಿ ಫಲಿತಾಂಶವನ್ನು ಶುಕ್ರವಾರ ಘೋಷಿಸಲಾಗಿದೆ ಎಂದು NDTV ವರದಿ ಮಾಡಿದೆ.

ಒಟ್ಟು 94.40 ಶೇಕಡಾದಷ್ಟು  ವಿದ್ಯಾರ್ಥಿಗಳು ಈ ವರ್ಷ 10 ನೇ ತರಗತಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಹುಡುಗಿಯರು ಹುಡುಗರಿಗಿಂತ ಶೇಕಡಾ 1.41 ರಷ್ಟು ಸಾಧನೆ ಮಾಡಿದ್ದಾರೆ. 64,908 ವಿದ್ಯಾರ್ಥಿಗಳು ಶೇಕಡಾ 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಹಾಗೂ  2.36 ಲಕ್ಷ (2,36,993) ವಿದ್ಯಾರ್ಥಿಗಳು ಶೇಕಡಾ 90 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಸಿಬಿಎಸ್ ಇ 10ನೇ ಬೋರ್ಡ್ ಫಲಿತಾಂಶ 2022 ಅನ್ನು ಸಿಬಿಎಸ್ ಇ ಯ ಅಧಿಕೃತ ವೆಬ್‌ಸೈಟ್‌ cbse.gov.in ನಲ್ಲಿ ಪರಿಶೀಲಿಸಬಹುದು.  ಸಿಬಿಎಸ್ ಇ 10 ನೇ ವಿದ್ಯಾರ್ಥಿಗಳು ವೆಬ್‌ಸೈಟ್‌ಗಳಾದ  cbseresults.nic.in, parikshasangam.cbse.gov.in ಮತ್ತು results.cbse.nic.in ನಲ್ಲಿ ತಮ್ಮ 10 ನೇ ತರಗತಿಯ ಬೋರ್ಡ್ ಫಲಿತಾಂಶ 2022 ಅನ್ನು ಸಹ ಪರಿಶೀಲಿಸಬಹುದು.

10 ನೇ ತರಗತಿಯ ವಿದ್ಯಾರ್ಥಿಗಳು ತಮ್ಮ 10 ನೇ ಬೋರ್ಡ್ ಫಲಿತಾಂಶ 2022 ಅನ್ನು ಡಿಜಿಲಾಕರ್‌ನಲ್ಲಿ ಹಾಗೂ  SMS ಮೂಲಕ ಪರಿಶೀಲಿಸಲು ಸಾಧ್ಯವಾಗುತ್ತದೆ.

ಸಿಬಿಎಸ್ ಇ ಈ ವರ್ಷದ ಎಪ್ರಿಲ್ ಹಾಗೂ  ಮೇ ತಿಂಗಳಲ್ಲಿ 2022 ರ ಬ್ಯಾಚ್‌ಗಾಗಿ 10 ನೇ ತರಗತಿ ಹಾಗೂ  12 ನೇ ತರಗತಿಯ ಟರ್ಮ್ 2 ಪರೀಕ್ಷೆಗಳನ್ನು ನಡೆಸಿತ್ತು. 10ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಎಪ್ರಿಲ್ 26 ರಿಂದ ಮೇ 4 ರವರೆಗೆ ನಡೆದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News