ಜನಸಂಖ್ಯೆ ನಿಯಂತ್ರಣ ಮಸೂದೆಯನ್ನು ವೈಯಕ್ತಿಕವಾಗಿ ಮಂಡಿಸುತ್ತೇನೆ: ಬಿಜೆಪಿ ಸಂಸದ

Update: 2022-07-22 17:07 GMT

ಹೊಸದಿಲ್ಲಿ, ಜು. 22: ಲೋಕಸಭೆಯಲ್ಲಿ ಜನಸಂಖ್ಯೆ ನಿಯಂತ್ರನ ಮಸೂದೆಯನ್ನು ವೈಯಕ್ತಿಕವಾಗಿ ಮಂಡಿಸುವುದಾಗಿ ಚಿತ್ರ ನಟನಾಗಿದ್ದು ರಾಜಕಾರಣಿಯಾಗಿ ಪರಿವರ್ತನೆಯಾಗಿರುವ ಬಿಜೆಪಿ ನಾಯಕ ರವಿ ಕಿಶನ್ ಶುಕ್ರವಾರ ಹೇಳಿದ್ದಾರೆ.

ಉತ್ತರಪ್ರದೇಶದ ಗೋರಖ್‌ಪುರ ಕ್ಷೇತ್ರದ ಸಂಸದನಾಗಿರುವ ಅವರಿಗೆ ನಾಲ್ವರು ಮಕ್ಕಳಿದ್ದಾರೆ. ‘‘ಜನಸಂಖ್ಯೆ ನಿಯಂತ್ರಣ ಮಸೂದೆಯನ್ನು ತಂದಾಗಲಷ್ಟೇ ನಾವು ವಿಶ್ವ ಗುರು ಆಗಬಹುದು. ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರುವುದು ಅತ್ಯಂತ ಅಗತ್ಯವಾಗಿದೆ’’ ಎಂದು ಕಿಶನ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

"ಏರುತ್ತಿರುವ ರೀತಿ ನೋಡಿದರೆ, ನಾವು ಜನಸಂಖ್ಯಾ ಸ್ಫೋಟದ ಕಡೆಗೆ ಹೋಗುತ್ತಿದ್ದೇವೆ. ನಾನು ಮಸೂದೆಯನ್ನು ಪರಿಚಯಿಸಲು ಮತ್ತು ನಾನು ಅದನ್ನು ಏಕೆ ಮಂಡಿಸುತ್ತಿದ್ದೇನೆ ಎನ್ನುವುದನ್ನು ವಿವರಿಸಲು ಅವಕಾಶ ನೀಡಬೇಕೆಂದು ನಾನು ವಿರೋಧ ಪಕ್ಷಗಳನ್ನು ವಿನಂತಿಸುತ್ತೇನೆ," ಎಂದು ಕಿಶನ್ ಸೇರಿಸಲಾಗಿದೆ.

ಜನಸಂಖ್ಯೆ ನಿಯಂತ್ರಣಕ್ಕೆ ಯಾವುದೇ ಶಾಸನಾತ್ಮಕ ಕ್ರಮವನ್ನು ಕೇಂದ್ರವು ಪರಿಗಣಿಸುತ್ತಿಲ್ಲ ಎಂದು ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಮಂಗಳವಾರ ರಾಜ್ಯಸಭೆಗೆ ತಿಳಿಸಿದ್ದರು. ರಾಷ್ಟ್ರೀಯ ಜನಸಂಖ್ಯಾ ನೀತಿ 2000 ಮತ್ತು ರಾಷ್ಟ್ರೀಯ ಆರೋಗ್ಯ ನೀತಿ 2017 ರ ಪ್ರಕಾರ ಸರ್ಕಾರವು 2045 ರ ವೇಳೆಗೆ ಜನಸಂಖ್ಯೆಯನ್ನು ಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಪವಾರ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News