ಈ.ಡಿ.ಯಿಂದ ನೀರವ್ ಮೋದಿಯ 253.62 ಕೋ.ರೂ.ಆಸ್ತಿ ಜಪ್ತಿ‌

Update: 2022-07-22 17:27 GMT


ಹೊಸದಿಲ್ಲಿ,ಜು.22: ಅಕ್ರಮ ಹಣ ವರ್ಗಾವಣೆಯ ತನಿಖೆಯ ಭಾಗವಾಗಿ ದೇಶಭ್ರಷ್ಟ ವಜ್ರವ್ಯಾಪಾರಿ ನೀರವ ಮೋದಿಗೆ ಸಂಬಂಧಿಸಿದ ಕಂಪನಿಗಳ 253.62 ಕೋ.ರೂ.ವೌಲ್ಯದ ರತ್ನಗಳು,ಚಿನ್ನಾಭರಣಗಳು ಮತ್ತು ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ (ಈ.ಡಿ)ವು ಶುಕ್ರವಾರ ತಿಳಿಸಿದೆ.

ಈ ಎಲ್ಲ ಚರಾಸ್ತಿಗಳು ಹಾಂಗ್ಕಾಂಗ್ನಲ್ಲಿವೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಪಿಎನ್ಬಿಗೆ ಎರಡು ಶತಕೋಟಿ ಡಾ.ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ತನ್ನ ಗಡಿಪಾರು ವಿರುದ್ಧ ಕಾನೂನು ಸಮರದಲ್ಲಿ ವಿಫಲಗೊಂಡಿರುವ ಮೋದಿ ಹಾಲಿ ಬ್ರಿಟನ್ ಜೈಲುವಾಸಿಯಾಗಿದ್ದು, ಸಿಬಿಐ ಕೂಡ ತನಿಖೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News