ಮಕ್ಕಳ ಶೌರ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

Update: 2022-07-23 14:09 GMT
ಸಾಂರ್ಭಿಕ ಚಿತ್ರ

ಬೆಂಗಳೂರು, ಜು.23: ಮಕ್ಕಳ ಶೌರ್ಯ ಮತ್ತು ಸಾಹಸ ಕಾರ್ಯಗಳಿಗಾಗಿ ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್‍ಫೇರ್ ವತಿಯಿಂದ 2022ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅ.15 (ಅಕ್ಟೋಬರ್ 15) ಕೊನೆಯ ದಿನವಾಗಿದೆ. ಪ್ರಶಸ್ತಿಗೆ ಆರು ವರ್ಷದ ಮೇಲ್ಪಟ್ಟ ಹಾಗೂ 18 ವರ್ಷದೊಳಗಿನ ಮಕ್ಕಳು ಅರ್ಹರಾಗಿರುತ್ತಾರೆ.

ಅಪಾಯದ ಸನ್ನಿವೇಶದಲ್ಲಿ ಅಸಾಧಾರಣಾ ಧೈರ್ಯ, ಸಮಯ ಪ್ರಜ್ಞೆ ಮತ್ತು ಸಾಹಸ ಪ್ರದರ್ಶಿಸಿ ಜನರ ಪ್ರಾಣ ರಕ್ಷಣೆ ಮುಂತಾದ ಮಕ್ಕಳ ಶೌರ್ಯ, ಸಾಹಸ ಕಾರ್ಯಗಳಿಗೆ ಸೂಕ್ತ ಮನ್ನಣೆ ನೀಡುವುದು ಯೋಜನೆಯಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಮಾಡಿರುವ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲು ಉದ್ದೇಶಿಸಲಾಗಿರುತ್ತದೆ. 

ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್‍ಫೇರ್ ವೆಬ್‍ಸೈಟ್‍ನಲ್ಲಿ ಅರ್ಜಿಗಳನ್ನು ಡೌನ್‍ಲೋಡ್ ಮಾಡಿಕೊಂಡು, ಭರ್ತಿ ಮಾಡಬೇಕು. ಭರ್ತಿ ಮಾಡಿದ ಅರ್ಜಿಗಳೊಂದಿಗೆ ಪೂರಕ ದಾಖಲೆಗಳನ್ನು ನಿಗಧಿತ ದಿನದೊಳಗೆ ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್‍ಫೇರ್ ಪ್ರಧಾನ ಕಚೇರಿಗೆ ತಲುಪಿಸುವಂತೆ ತಿಳಿಸಲಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News