ರಾಮನಾಥ್‌ ಕೋವಿಂದ್‌ ರನ್ನು ನಿರ್ಲಕ್ಷಿಸಿದ ಪ್ರಧಾನಿ ಮೋದಿ: ಸಾಮಾಜಿಕ ತಾಣದಲ್ಲಿ ವೀಡಿಯೊ ವೈರಲ್‌

Update: 2022-07-24 17:28 GMT
Photo: SS/Twitter

ಹೊಸದಿಲ್ಲಿ: ನಿರ್ಗಮಿತ ರಾಷ್ಟ್ರಪತಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ   ಕೋವಿಂದ್ ಅವರನ್ನು ನಿರ್ಲಕ್ಷಿಸಿ ಕ್ಯಾಮೆರಾವನ್ನು ನೋಡುತ್ತಿರುವಂತೆ ತೋರುವ ಪ್ರಧಾನಿ ಮೋದಿ ಅವರ ವಿಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದೆ. ನಿರ್ಗಮಿಸುತ್ತಿರುವ ರಾಷ್ಟ್ರಪತಿಗೆ ಗೌರವ ಸಲ್ಲಿಸುವುದಕ್ಕಿಂತ ಕೆಮರಾಗೆ ಪೋಸ್‌ ಕೊಡುವುದೇ ಪ್ರಧಾನಿಯವರ ಆದ್ಯತೆಯಾಗಿದೆ ಎಂದು ಹಲವು ನೆಟ್ಟಿಗರು ಟೀಕಿಸಿದ್ದಾರೆ.

ಎಎಪಿಯ ಸಂಜಯ್‌ ಎಎಪಿಯ ಸಂಸದ ಸಂಜಯ್ ಸಿಂಗ್ ಈ ವಿಡಿಯೋವನ್ನು ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು."(ಮೋದಿಗೆ) ಅಧ್ಯಕ್ಷರಿಗಿಂತ ಫೋಟೋಗಳು ಮುಖ್ಯ." ಎಂದು ಕಿಡಿಕಾರಿರುವ ಸಿಂಗ್‌, ಪ್ರಧಾನಿ ಮೋದಿ ರಾಷ್ಟ್ರಪತಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದಾರೆ.

“ಇಂತಹ ಅವಮಾನಕ್ಕೆ ಕ್ಷಮಿಸಿ ಸರ್.  ಈ ಜನ ಹೀಗಿದ್ದಾರೆ, ನಿಮ್ಮ ಅವಧಿ ಮುಗಿದಿದೆ, ಈಗ ಅವರು ನಿಮ್ಮತ್ತ ನೋಡುವುದಿಲ್ಲ” ಎಂದು ಸಂಜಯ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

ಭಾರತದ ಪ್ರಧಾನಿ ದೇಶದ ‘ದಲಿತ’ ರಾಷ್ಟ್ರಪತಿಯನ್ನು ನಿರ್ಲಕ್ಷಿಸಿ ಕ್ಯಾಮೆರಾಗೆ ಆದ್ಯತೆ (ನೀಡುತ್ತಿದ್ದಾರೆ)ʼ ಎಂದು ಪ್ರೊಫೆಸರ್‌ ಅಶೋಕ್‌ ಸ್ವೈನ್‌ ಇದೇ ವಿಡಿಯೋವನ್ನು ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ, ಇದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿ ಕೂಡಾ ಅಖಾಡಕ್ಕೆ ಇಳಿದಿದ್ದು, ಎಎಪಿ ಸೇರಿದಂತೆ ಪ್ರತಿಪಕ್ಷದ ನಾಯಕರು ಹಂಚಿರುವ ವಿಡಿಯೋ ಎಡಿಟೆಡ್‌ ಎಂದು ಹೇಳಿದೆ.    ಬಿಜೆಪಿಯ ಅಮಿತ್ ಮಾಳವಿಯಾ ಅವರು ಈ ವಿಡಿಯೋದ ಸಂಪೂರ್ಣ ವಿಡಿಯೋವನ್ನು ಪೋಸ್ಟ್‌ ಮಾಡಿದ್ದು,  ಪ್ರಧಾನಿ ಅವರು ರಾಮನಾಥ್‌ ಕೋವಿಂದ್‌ ಅವರಿಗೆ ಅವಮಾನಿಸಿದ್ದಾರೆ ಎಂಬ ಪ್ರತಿಪಾದನೆಯನ್ನು ಅಲ್ಲಗೆಳೆದಿದ್ದಾರೆ.

“ನಮ್ಮ ಪ್ರಧಾನಿಯವರು ರಾಷ್ಟ್ರಪತಿಗಳಿಗೆ ಗೌರವ ಕೊಡಲಿಲ್ಲ ಎಂದು ಜನರು ಹಂಚಿಕೊಳ್ಳುತ್ತಿದ್ದಾರೆ. ಇದು ಸಂಪೂರ್ಣ ವಿಡಿಯೋ. ನೀವು ಬಿಜೆಪಿ ಅಥವಾ ನರೇಂದ್ರ ಮೋದಿಯವರೊಂದಿಗೆ ಭಿನ್ನಮತ ಹೊಂದಿರಬಹುದು. ಆದರೆ, ಸುಳ್ಳು ಆರೋಪ ಮಾಡುವುದು ಪಾಪ.” ಎಂದು ನಾಗ ಗುರುನಾತ ಸರ್ಮ ಎಂಬವರು ಟ್ವೀಟ್‌ ಮಾಡಿದ್ದಾರೆ.

https://twitter.com/mngsarma/status/1551143029204869120

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News