ಮಂಕಿಪಾಕ್ಸ್ ವಿರುದ್ಧ ದಡಾರ ಲಸಿಕೆಗೆ ಐರೋಪ್ಯ ಒಕ್ಕೂಟ ಅನುಮೋದನೆ

Update: 2022-07-25 16:29 GMT

ಕೋಪನ್ಹೇಗನ್ (ಡೆನ್ಮಾರ್ಕ್), ಜು. 25: ಮಂಕಿಪಾಕ್ಸ್ ಕಾಯಿಲೆಯ ವಿರುದ್ಧ ದಡಾರ ಲಸಿಕೆಯನ್ನು ಬಳಸಲು ಯುರೋಪಿಯನ್ ಕಮಿಶನ್ ಅನುಮೋದನೆ ನೀಡಿದೆ ಎಂದು ಈ ಲಸಿಕೆಯನ್ನು ಅಭಿವೃದ್ಧಿಪಡಿಸಿರುವ ಡೆನ್ಮಾರ್ಕ್ ನ ಔಷಧ ತಯಾರಿಕಾ ಕಂಪೆನಿ ಬವೇರಿಯನ್ ನಾರ್ಡಿಕ್ ಸೋಮವಾರ ತಿಳಿಸಿದೆ. ಮಂಕಿಪಾಕ್ಸ್ ಜಾಗತಿಕ ಆರೋಗ್ಯ ಬೆದರಿಕೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ) ಘೋಷಿಸಿದ ಬಳಿಕ ಈ ಅನುಮೋದನೆ ನೀಡಲಾಗಿದೆ.

‘‘ಮಂಕಿಪಾಕ್ಸ್ ಕಾಯಿಲೆಯಿಂದ ರಕ್ಷಣೆ ಪಡೆಯಲು ಕಂಪೆನಿಯು ತಯಾರಿಸಿರುವ ದಡಾರ ಲಸಿಕೆ ‘ಇಮ್ವಾನೆಕ್ಸ್’ಗೆ ಯುರೋಪಿಯನ್ ಕಮಿಶನ್ ಅನುಮೋದನೆ ನೀಡಿದೆ’’ ಎಂದು ಬವೇರಿಯನ್ ನಾರ್ಡಿಕ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ಮಂಕಿಪಾಕ್ಸ್ ಜಾಗತಿಕ ಆರೋಗ್ಯ ಬೆದರಿಕೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಶನಿವಾರ ಘೋಷಿಸಿದೆ. ಈವರೆಗೆ 72 ದೇಶಗಳಲ್ಲಿ ಸುಮಾರು 16,000 ಜನರು ಈ ಕಾಯಿಲೆಯ ಸೋಂಕಿಗೆ ಒಳಗಾಗಿದ್ದಾರೆ.

ದಡಾರ ಕಾಯಿಲೆಯನ್ನು ತಡೆಯಲು ಇಮ್ವಾನೆಕ್ಸನ್ನು ಐರೋಪ್ಯ ಒಕ್ಕೂಟದಲ್ಲಿ 2013ರಿಂದ ಬಳಸಲಾಗುತ್ತಿದೆ. ಮಂಕಿಪಾಕ್ಸ್ ವೈರಸ್ ಮತ್ತು ದಡಾರ ವೈರಸ್ಗಳ ನಡುವಿನ ಸಾಮ್ಯತೆಗಳ ಹಿನ್ನೆಲೆಯಲ್ಲಿ, ಮಂಕಿಪಾಕ್ಸ್ ಗೂ ಈ ಲಸಿಕೆ ಪರಿಣಾಮಕಾರಿಯಾಗುತ್ತದೆ ಎಂಬ ನಿರ್ಧಾರಕ್ಕೆ ಬರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News