×
Ad

ಆ.2-3ರಂದು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಫಿಸಿಯೋಸಿಮ್‌ಕಾನ್-2022

Update: 2022-07-25 23:22 IST

ಮಂಗಳೂರು : ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್ ಅತಿಥ್ಯದಲ್ಲಿ ವಿವಿಧ ಸಹ ಸಂಸ್ಥೆಗಳ ಸಂಯೋಜನೆಯೊಂದಿಗೆ ಫಿಸಿಯೋಥೆರಪಿ ವಿಭಾಗದ ಮೂಲಕ ಆಗಸ್ಟ್ 2 ಮತ್ತು 3ರಂದು ದೇಶದಲ್ಲೇ ಪ್ರಥಮ ಬಾರಿಗೆ ಫಿಸಿಯೋಥೆರಪಿಗಳ ಅಂತರ್‌ ರಾಷ್ಟ್ರೀಯ ಸಮ್ಮೇಳನ ‘ಪಿಸಿಯೋಸಿಮ್‌ಕಾನ್-2022’ ಹಮ್ಮಿಕೊಳ್ಳಲಾಗಿದೆ ಎಂದು ಫಾದರ್ ಮುಲ್ಲರ್ ಸೇವಾ ಸಂಸ್ಥೆ ಗಳ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುಯೆಲ್ಲೊ ತಿಳಿಸಿದ್ದಾರೆ.

ಅವರು ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಕಚೇರಿ ಯಲ್ಲಿಂದು ಪಿಸಿಯೋಸಿಮ್‌ಕಾನ್-2022ರ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಿದ ಬಳಿಕ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

2 ದಿನಗಳ ಸಮ್ಮೇಳನವು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ದಶಮಾನೋತ್ಸವ ಸಭಾಂಗಣದಲ್ಲಿ ಜರುಗಲಿದೆ. ಈ ಸಮ್ಮೇಳನ ತುರ್ತು ಸಂದರ್ಭದಲ್ಲಿ ಪಿಸಿಯೋಥೆರಪಿಯ ಕೌಶಲ್ಯಗಳ ಬಗ್ಗೆ ಬೆಳಕು ಚೆಲ್ಲುವ ಉದ್ದೇಶ ಹೊಂದಿದೆ. ಸಿಮ್ಯುಲೇಶನ್ ಮೂಲಕ ಫಿಸಿಯೋಥೆರಪಿ ಸಮ್ಮೇಳನ ನಡೆಯುತ್ತಿರುವುದು ದೇಶದಲ್ಲೇ ಪ್ರಥಮ. ಎರಡು ದಿನ ಗಳ ಸಮ್ಮೇಳನದಲ್ಲಿ ದೇಶ ವಿದೇಶಗಳ ಸುಮಾರು 200 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.

ಯು.ಕೆ. ಸೌತಾಂಪ್ಟನ್ ಯುನಿರ್ವಸಿಟಿಯ ಸಂಪನ್ಮೂಲ ವ್ಯಕ್ತಿ ಡಾ.ಡೆಬ್ಬಿಥ್ಯಾಕ್ ರೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬಳಿಕ ವಿವಿಧ ವಿಷಯಗಳ ಬಗ್ಗೆ ಗೋಷ್ಠಿಗಳು ನಡೆಯಲಿದ್ದು, ರಾಷ್ಟ್ರೀಯ, ಅಂತರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಗಳು ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿ ಗಳಾಗಿ ಇಂಡಿಯನ್ ಅಸೋಸಿಯೇಶನ್ ಆಫ್ ಫಿಸಿಯೋಥೆರಪಿಯ ರಾಜ್ಯಾಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ, ಕಾರ್ಯ ನಿರ್ವಾಹಕ ಅಧ್ಯಕ್ಷ ಡಾ.ಸಂಜೀವ್ ಝಾ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.

ಸಮ್ಮೇಳನವನ್ನು ಫಾದರ್ ಮುಲ್ಲರ್ ಸೇವಾ ಸಂಸ್ಥೆ ಗಳ ನಿರ್ದೇಶಕ ರು, ಫಾ.ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ವಂ.ಅಜಿತ್ ಬಿ. ಮಿನೇಜಸ್, ಡೀನ್ ಡಾ.ಆ್ಯಂಟನಿ ಸೆಲ್ವನ್ ಡಿಸೋಜ ಮತ್ತು ಫಾ.ಮುಲ್ಲರ್ ಹೆಲ್ತ್ ಕೇರ್ ಸೆಂಟರ್ ಮುಖ್ಯಸ್ಥ ಪ್ರೊ. ಲುಲು ಶರೀಫ್ ಮುಹಮ್ಮದ್‌ರ ಸಹಕಾರ ದೊಂದಿಗೆ ಸಂಘಟಿಸಲಾಗಿದೆ ಎಂದು ಫಾದರ್ ಮುಲ್ಲರ್ ಫಿಸಿಯೋಥೆರಪಿ ವಿಭಾಗದ ಮುಖ್ಯಸ್ಥ ರಾದ ಪ್ರೊ.ಚೆರಿಶ್ಮಾ ಡಿಸಿ  ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ವಂ.ಅಜಿತ್ ಬಿ.ಮಿನೇಜಸ್, ಡೀನ್ ಡಾ.ಆ್ಯಂಟನಿ ಸೆಲ್ವನ್ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News