×
Ad

6 ಲಕ್ಷ ನಕಲಿ ಆಧಾರ್ ಸಂಖ್ಯೆ ರದ್ದು

Update: 2022-07-25 23:43 IST
photo: PTI

ಹೊಸದಿಲ್ಲಿ, ಜು. 25: ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) 6 ಲಕ್ಷ ಆಧಾರ್ ಸಂಖ್ಯೆಗಳನ್ನು ರದ್ದುಗೊಳಿಸಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಈ ಎಲ್ಲಾ ಆಧಾರ್ ಸಂಖ್ಯೆಗಳು ನಕಲಿ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆಯ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ಅವರು ಕಳೆದ ವಾರ ಆರಂಭದಲ್ಲಿ ಮುಂಗಾರು ಅಧಿವೇಶನದ ಕಲಾಪದ ಸಂದರ್ಭ ಸಂಸತ್ತಿಗೆ ತಿಳಿಸಿದ್ದಾರೆ. ನಕಲಿ ಆಧಾರ್ ಕಾರ್ಡ್ ಹಾಗೂ ಆಧಾರ್ ಸಂಖ್ಯೆಗಳನ್ನು ಗಂಭೀರ ಅಪರಾಧಗಳನ್ನು ನಡೆಸಲು ಆಗಾಗ ಬಳಸಲಾಗುತ್ತಿದೆ. ಇದನ್ನು ನಿಷೇಧಿಸಲು ಯುಐಡಿಎಐ ನಿರಂತರ ಕ್ರಮ ತೆಗೆದುಕೊಳ್ಳುತ್ತದೆ.

ಲೋಕಸಭೆಯಲ್ಲಿ ಮುಂಗಾರು ಅಧಿವೇಶನದ ಸಂದರ್ಭ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಕಲಿ ಆಧಾರ್ ಸೃಷ್ಟಿಸುವ ಸಮಸ್ಯೆಯನ್ನು ನಿಗ್ರಹಿಸಲು ಪ್ರಾಧಿಕಾರ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು. ನಕಲಿ ಮಾಡುವುದನ್ನು ತಡೆಗಟ್ಟಲು ಆಧಾರ್ ಪರಿಶೀಲನೆಗೆ ‘ಮುಖ’ವನ್ನು ಹೆಚ್ಚುವರಿ ವೈಶಿಷ್ಟ್ಯವಾಗಿ ಸೇರಿಸಲಾಗಿತ್ತು. ಇದರಿಂದ 598,999 ಆಧಾರ್ ಸಂಖ್ಯೆಯನ್ನು ರದ್ದುಗೊಳಿಸಲು ಸಾಧ್ಯವಾಯಿತು ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News