ಕೊಡವೂರು: ಔಷಧೀಯ ಕಷಾಯ ವಿತರಣೆ
Update: 2022-07-28 18:49 IST
ಉಡುಪಿ : ಬ್ರಾಹ್ಮಣ ಮಹಾ ಸಭಾ ಕೊಡವೂರು ವಲಯ ಸಮಿತಿ ವತಿಯಿಂದ ಆಟಿ ಅಮಾವಾಸ್ಯೆಯ ದಿನವಾದ ಇಂದು ಸಾರ್ವಜನಿಕರಿಗೆ ಔಷಧೀಯ ಗುಣವುಳ್ಳ ಹಾಲೆ ಕೆತ್ತೆಯ ಕಷಾಯವನ್ನು ವಿತರಿಸಲಾಯಿತು.
ಕೊಡವೂರು ಮೂಡುಬೆಟ್ಟುನಲ್ಲಿ ಉಪಾಧ್ಯಾಯ ಶುಶ್ರೂಷಾಲಯದ ಹಿರಿಯ ವೈದ್ಯ ಡಾ.ಮಂಜುನಾಥ ಉಪಾಧ್ಯಾಯ ಕಷಾಯ ವಿತರಣೆಗೆ ಚಾಲನೆ ನೀಡಿ ನೆರೆದಿದ್ದ ಸಾರ್ವಜನಿಕರಿಗೆ ಕಷಾಯ ವಿತರಿಸಿದರು.
ಈ ಸಂದರ್ಭದಲ್ಲಿ ಕೊಡವೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀನಿವಾಸ ಉಪಾಧ್ಯ, ಧಾರ್ಮಿಕ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್, ಕೋಶಾಧಿಕಾರಿ ಶ್ರೀಧರ ಶರ್ಮ, ಪದಾಧಿಕಾರಿಗಳಾದ ಚಂದ್ರಶೇಖರ ರಾವ್, ಸುಧೀರ್ ರಾವ್, ಮಂಜುನಾಥ ಭಟ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್ ಸ್ವಾಗತಿಸಿ ವಂದಿಸಿದರು.