ಭಾರತ ಸೇವಾದಳ ರಾಜ್ಯ ಕಾರ್ಯಕಾರಿಣಿಗೆ ತಿಮ್ಮಪ್ಪ ಶೆಟ್ಟಿ ಆಯ್ಕೆ
Update: 2022-07-28 18:51 IST
ಉಡುಪಿ, ಜು.28: ಕರ್ನಾಟಕ ಸರಕಾರದ ಅಂಗ ಸಂಸ್ಥೆಯಾದ ಭಾರತ ಸೇವಾದಳ ಸಂಸ್ಥೆಯ ರಾಜ್ಯ ಕಾರ್ಯಕಾರಿಣಿಗೆ ಉಡುಪಿ ಜಿಲ್ಲಾ ಭಾರತ ಸೇವಾದಳದ ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ ಆಯ್ಕೆಯಾಗಿದ್ದಾರೆ.
ಇವರು ಭಾರತ ಸೇವಾದಳ ಸಂಸ್ಥೆಯಲ್ಲಿ ಶಾಖಾ ನಾಯಕರಾಗಿ, ತಾಲೂಕು ಅಧಿನಾಯಕರಾಗಿ, ೧೨ ವರ್ಷ ಉಡುಪಿ ಜಿಲ್ಲಾ ಭಾರತ ಸೇವಾದಳದ ಜಿಲ್ಲಾ ಸಂಘಟಕರಾಗಿದ್ದರು. ಇವರಿಗೆ ರಾಜ್ಯ ಚುನಾವಣಾಧಿಕಾರಿ ಹಾಗೂ ರಾಜ್ಯ ದಳಪತಿ ಎಚ್.ಎಸ್.ಚಂದ್ರಶೇಖರ್ ೨೦೨೨-೨೭ರ ಸಾಲಿಗೆ ರಾಜ್ಯ ಸದಸ್ಯತ್ವದ ಪ್ರಮಾಣಪತ್ರವನ್ನು ನೀಡಿ ಅಭಿನಂದಿಸಿದ್ದಾರೆ.