ಫಾಝಿಲ್ ಕೊಲೆ ಪ್ರಕರಣ: ಮುಲ್ಕಿಯಲ್ಲಿ ಹಲವರ‌ ವಿಚಾರಣೆ

Update: 2022-07-29 15:24 GMT

ಮುಲ್ಕಿ : ಸುರತ್ಕಲ್‌ನ ಮೂಡ ಮಾರುಕಟ್ಟೆಯ ಬಳಿ ಗುರವಾರ ರಾತ್ರಿ ನಡೆದ ಫಾಝಿಲ್‌ ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಲವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿದ್ದ ಹಲವರನ್ನು ಮುಲ್ಕಿ ಪೊಲೀಸರು ಠಾಣೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.

ಈ ಕುರಿತು ವಾರ್ತಾಭಾರತಿಯಲ್ಲಿ ಮಾತನಾಡಿದ ಮಂಕಿ ಪೊಲೀಸ್ ಠಾಣೆಯ ನಿರೀಕ್ಷಕ ಕುಸುಮಾಧರ ಅವರು, ಸಾಮಾನ್ಯವಾಗಿ ಅಪರಾಧ ಕೃತ್ಯಗಳು ನಡೆದಾಗ ಆಯಾ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳಲ್ಲಿ ಗುರುತಿಸಿಕೊಂಡವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುವುದು ಸಾಮಾನ್ಯ.‌ ಅದರಂತೆಯೇ ಕೆಲವರನ್ನು ವಿಚಾರಣೆ ಮಾಡಲಾಗಿದೆ‌ ಎಂದು ಮಾಹಿತಿ‌ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News