ಕೊಣಾಜೆ : ಧಾರಾಕಾರ ಮಳೆ; ಗುಡ್ಡ ಕುಸಿದು ಮನೆಗಳಿಗೆ ಹಾನಿ, ರಸ್ತೆ ತಡೆ

Update: 2022-07-30 07:42 GMT

ಕೊಣಾಜೆ: ಕೊಣಾಜೆ ಗ್ರಾಮದ ಪುರುಷಕೋಡಿ ಎಂಬಲ್ಲಿ   ಶುಕ್ರವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ  ತೋಡಿನ ಬದು ಕುಸಿತವಾಗಿ ಮೋನಪ್ಪ ಗೌಡ ಎಂಬವರ ಮನೆ ಅಂಗಳವು ಭಾಗಷಃ ಕುಸಿದು ಮನೆಯು ಅಪಾಯದಲ್ಲಿದೆ.

ಕೊಣಾಜೆ ಗ್ರಾಮದ ನಡುಪದವು ಎಂಬಲ್ಲಿ ಪುರುಷೋತ್ತಮ ಎಂಬವರ ಮನೆಗೆ ತೋಡಿನ ನೀರು ಮನೆ ಆವರಣದೊಳಗೆ ನುಗ್ಗಿ ಅವರಣ ಗೋಡೆ ಕುಸಿದು ಹಾನಿಯಾಗಿದೆ.

ಕುರ್ನಾಡು ಗ್ರಾಮದ ಮಿತ್ತಕೋಡಿ ಎಂಬಲ್ಲಿ ಭೂ ಕುಸಿತ ಉಂಟಾಗಿ ಗುಡ್ಡದ ಮಣ್ಣು ರಸ್ತೆಗೆ ಬಿದ್ದು ರಸ್ತೆ ಬಂದ್ ಆಗಿದೆ. ಇಲ್ಲಿ ಇದು  ಮೂರನೇ ಬಾರೀ ಗುಡ್ಡ ಕುಸಿದಿದ್ದು ರಸ್ತೆ ಬಂದ್ ‌ಆಗಿದೆ.

ಕೊಣಾಜೆ ಗ್ರಾಮದ ಭಂಡಾರಮನೆ ಎಂಬಲ್ಲಿ ಮುದರ ಪೂಜಾರಿ, ನಾರಾಯಣ ಪೂಜಾರಿ ಎಂಬವರ ಕೃಷಿ ಭೂಮಿಗೆ ತೋಡಿನ ಬದಿ ಕುಸಿದು ನೀರು ನುಗ್ಗಿ ಭತ್ತದ ಬೆಳೆಗೆ ಹಾನಿಯಾಗಿದೆ. ಕೋಡಿಜಾಲ್ ಎಂಬಲ್ಲಿಯ ಹಾಜಿ ಮೊಯ್ದಿನ್ ಕುಂಞಿ ಅವರ ಮನೆಯ ಎದುರು ಭಾಗದಲ್ಲಿರುವ ತಡೆಗೋಡೆ ಕುಸಿತದಿಂದ ಮನೆಗೆ  ಹಾನಿಯಾಗಿರುತ್ತದೆ. ಕೊಣಾಜೆ ಗ್ರಾಮದ ಗುಡ್ಡುಪಾಲ್ ಎಂಬಲ್ಲಿ ತಿಮ್ಮಪ್ಪ ಶೆಟ್ಟಿಗಾರ್, ಚಂದ್ರ ಎಂಬವರ ಮನೆಗೆ ನೆರೆ ನೀರು ಬಂದು ಹಾನಿಯಾಗಿದೆ.

ಹರೇಕಳ ಗ್ರಾಮದ ತಾಜುಲ್ ಉಲೆಮಾ ಮಸೀದಿಯ ಆವರಣ ಗೋಡೆಯು ಕುಸಿದು ಬಿದ್ದಿದ್ದು, ದೆಬ್ಬೇಲಿ ಬಳಿ ರಸ್ತೆಗೆ ಗುಡ್ಡದ ಮಣ್ಣು ಕುಸಿದು ಬಿದ್ದಿದೆ. ನ್ಯೂಪಡ್ಪುವಿನ ಅಝೀಝ್ ಎಂಬವರ ಮನೆಗೆ ಹಾಗೂ ಕಡವಿನ ಬಳಿಯ ಅಶೋಕ್ ಎಂಬವರ ಮನೆಗೆ ಮಣ್ಣು ಕುಸಿದು ಹಾನಿಯಾಗಿದೆ. ಹರೇಕಳ ಯೋಗಿಶ್ ಎಂಬವರ ಮನೆಗೆ ಧರೆ ಕುಸಿದು ಹಾನಿ ಸಂಭವಿಸಿದೆ.

ಮಳೆ ಹಾನಿ ಪ್ರದೇಶಕ್ಕೆ ತಹಶೀಲ್ದಾರ್ ಗುರುಪ್ರಸಾದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News