ಖೆರ್ಸೊನ್ ಸಂಘರ್ಷದಲ್ಲಿ 100ಕ್ಕೂ ಅಧಿಕ ರಶ್ಯನ್ ಸೈನಿಕರ ಸಾವು: ಉಕ್ರೇನ್ ಸೇನೆ ಘೋಷಣೆ

Update: 2022-07-30 16:36 GMT

 ಒಡೆಸಾ,ಜು.30: ಉಕ್ರೇನ್ ನ ಖೆರ್ಸಾನ್ ಪ್ರಾಂತದಲ್ಲಿ ಶುಕ್ರವಾರ ನಡೆದ ಭೀಕರ ಕದನದಲ್ಲಿ ತಾನು ಸುಮಾರು1 100ಕ್ಕೂ ಅಧಿಕ ಮಂದಿ ರಶ್ಯನ್ ಸೈನಿಕರನ್ನು ಹತ್ಯೆಗೈದಿರುವುದಾಗಿ ಹಾಗೂ ರಶ್ಯ ಸೇನೆಯ ಎರಡು ಶಸ್ತ್ರಾಗಾರಗಳನ್ನು ನಾಶಪಡಿಸಿರುವುದಾಗಿ ಉಕ್ರೇನ್ ಸೇನೆ ತಿಳಿಸಿದೆ. ದಕ್ಷಿಣ ಉಕ್ರೇನ್ನ ಆಯಕಟ್ಟಿನ ಪ್ರಾಂತವಾದ ಖೆರ್ಸಾನ್ನಲ್ಲಿ ಉಕ್ರೇನ್ ಸೇನೆಯು ರಶ್ಯನ್ ಸೇನೆಯ ಮೇಲೆ ತೀವ್ರ ಪ್ರತಿದಾಳಿ ನಡೆಸುತ್ತಿದೆ. ಖೆರ್ಸಾನ್ ಮೂಲಕ ಉಕ್ರೇನ್ನಲ್ಲಿರುವ ರಶ್ಯದ ಸೈನಿಕರಿಗೆ ಶಸ್ತ್ರಾಸ್ತ್ರ,ಸರಂಜಾಮುಗಳ ಪೂರೈಕೆ ನಡೆಯುತ್ತಿರುವುದರಿಂದ ಆ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಲು ಉಕ್ರೇನ್ ಸೇನೆ ಶತಾಯಗತಾಯ ಹೋರಾಟ ನಡೆಸುತ್ತಿದೆ.

ಡಿನಿಪ್ರೊ ನದಿಯ ಮೇಲಿನ ರೈಲು ಮಾರ್ಗವನ್ನು ಉಕ್ರೇನ್ ಸೇನೆ ಕಡಿದುಹಾಕಿರುವುದಾಗಿ ಉಕ್ರೇನ್ಸೇನೆಯು ದಕ್ಷಿಣ ಕಮಾಂಡ್ತಿಳಿಸಿದೆ. ಇದರಿಂದಾಗಿ ರಶ್ಯ ಆಕ್ರಮಿತ ಕ್ರಿಮಿಯಾ ಹಾಗೂ ಪೂರ್ವದ ಪ್ರದೇಶಗಳಿಂದ ರಶ್ಯ ಪಡೆಳು ಶಸ್ತ್ರಾಸ್ತ್ರಗಳನ್ನು ಪಡೆಯುವುದು ಕಷ್ಟಕರವಾಗಿದೆ ಎಂದು ಅದು ಹೇಳಿದೆ.

ಪಾಶ್ಚಾತ್ಯ ರಾಷ್ಟ್ರಗಳು ತನಗೆ ಪೂರೈಕೆ ಮಾಡಿರುವ ದೂರವ್ಯಾಪ್ತಿಯ ಕ್ಷಿಪಣಿ ವ್ಯವಸ್ಥೆಗಳನ್ನು ಬಳಸಿಕೊಂಡು, ಡಿನಿಪ್ರೊ ನದಿಯ ಮೇಲಿನ ಸೇತುವೆಗಳನ್ನು ಉಕ್ರೇನ್ ಸೇನೆ ಕಡಿದುಹಾಕಿದೆ. ಇದರಿಂದ ಖೆರ್ಸಾನ್ ನಗರದ ಸಂಪರ್ಕ ಸಂಪೂರ್ಣ ಕಡಿದುಹೋಗಿದ್ದು, ಅಲ್ಲಿನ ಪಶ್ಚಿಮ ದಂಡೆಯಲ್ಲಿ ಬೀಡುಬಿಟ್ಟಿರುವ ರಶ್ಯ ಸೇನೆಯ 49 ನೇ ತುಕಡಿಯು ಅಸಹಾಯಕ ಸ್ಥಿತಿಯಲ್ಲಿದೆ ಎಂದು ಬ್ರಿಟಿಶ್ ರಕ್ಷಣಾ ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದಾರೆ.

ಶುಕ್ರವಾರ ಖೆರ್ಸಾನ್ ಪ್ರಾಂತದಲ್ಲಿ ನಡೆದ ಸಂಘರ್ಷದಲ್ಲಿ 100ಕ್ಕೂ ಅಧಿಕ ರಶ್ಯನ್ ಸೈನಿಕರು ಸಾವನ್ನಪ್ಪಿದ್ದಾರೆ ಹಾಗೂ ಏಳು ಸಮರ ಟ್ಯಾಂಕ್ಗಳು ನಾಶವಾಗಿವೆ ಎಂದು ಉಕ್ರೇನ್ ಸೇನೆ ಹೇಳಿದೆ. ಫೆಬ್ರವರಿ 24ರಂದು ರಶ್ಯ ಸೇನೆಯು ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದ ಬಳಿಕ ರಶ್ಯನ್ನರು ಅತಿಕ್ರಮಿಸಿಕೊಂಡಿದ್ದ ಮೊದಲ ಪ್ರಾಂತವಾಗಿದೆ.

ಮಾಸ್ಕೊ ಬೆಂಬಲಿತ ಪ್ರತ್ಯೇಕವಾದಿಗಳ ವಶದಲ್ಲಿರುವ ಡೊನೆಟೆಸ್ಕ್ ಪ್ರಾಂತದ ಒಲೆನಿವ್ಕಾ ಪಟ್ಟಣದಲ್ಲಿರುವ ಕಾರಾಗೃಹವೊಂದರ ಮೇಲೆ ಉಕ್ರೇನ್ ಸೇನೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಉಕ್ರೇನಿ ಯುದ್ಧ ಕೈದಿಗಳು ಸಾವನ್ನಪ್ಪಿದ್ದಾರೆ ಹಾಗೂ 75 ಮಂದಿ ಗಾಯಗೊಂಡಿದ್ದಾರೆಂದುು ರಶ್ಯದ ರಕ್ಷಣಾ ಸಚಿವಾಲಯ ತಿಳಿಸಿದೆ.

ಉಕ್ರೇನ್ ಸೇನೆಯು ಅಮೆರಿಕ ನಿರ್ಮಿತ ಹಿಮಾರ್ಸ್ ರಾಕೆಟ್ಗಳನ್ನು ಬಳಸಿ ರಶ್ಯ ಸೇನೆಯ ಕಾರಾಗೃಹದ ಮೇಲೆ ದಾಳಿ ನಡೆಸಿದೆಯೆಂದು ವಕ್ತಾರರು ತಿಳಿಸಿದ್ದಾರೆ.

ಆದರೆ ಉಕ್ರೇನಿ ಸೇನೆಯು ಕ್ಷಿಪಣಿ ದಾಳಿಯ ಹೊಣೆಹೊತ್ತುಕೊಳ್ಳಲು ನಿರಾಕರಿಸಿದೆ. ಅಲ್ಲಿ ಬಂಧಿತರಾಗಿದ್ದ ಉಕ್ರೇನಿಯನ್ ಕೈದಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದುದನ್ನು ಮುಚ್ಚಿಹಾಕುವ ಉದ್ದೇಶದಿಂದ ಅದಾಗಿಯೇ ಈ ದಾಳಿಯನ್ನು ನಡೆಸಿದೆಯೆಂದು ಉಕ್ರೇನ್ ಸೇನೆಯ ವಕ್ತಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News