×
Ad

ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದ ಚೀನಾದ ರಾಕೆಟ್:‌ ಆಗಸದ ದೃಶ್ಯಗಳ ವೀಡಿಯೊ ವೈರಲ್

Update: 2022-07-31 17:06 IST
Photo: twitter

ಕುಂಚಿಂಗ್:‌ ಚೀನಾದ ರಾಕೆಟ್ ಒಂದು ವಾರದೊಳಗೆ ಭೂಮಿಗೆ ಅಪ್ಪಳಿಸಲಿದೆ ಎಂದು ಒಂದು ವಾರದ ಹಿಂದೆ ನಾಸಾದ ಗಗನಯಾತ್ರಿಯೊಬ್ಬರು ವ್ಯಕ್ತಪಡಿಸಿದ್ದ ಆತಂಕ ನಿಜವಾಗಿದೆ. ಚೀನಾದ ರಾಕೆಟ್ ಶನಿವಾರ ರಾತ್ರಿ ಮಲೇಷ್ಯಾ ಬಳಿ ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದೆ. ಅದಕ್ಕೂ ಮುನ್ನ ಅದು ವಾಯು ಮಂಡಲದಲ್ಲೇ ಹೊತ್ತಿ ಉರಿದಿದ್ದು, ಆಕಾಶದಲ್ಲಿ ಪಟಾಕಿಯಂತೆ ಬೆಳಗಿದ ರಾಕೆಟ್‌ನ ದೃಶ್ಯಾವಳಿಗಳು ಸದ್ಯ ವೈರಲ್‌ ಆಗಿವೆ. ಮಲೇಷ್ಯಾದ ಕುಚಿಂಗ್ ಸಿಟಿಯಿಂದ ಸೆರೆ ಹಿಡಿಯಲ್ಪಟ್ಟ ಹಲವು ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದಾರೆ.

ಕಳೆದ ವಾರ, NASA ಗಗನಯಾತ್ರಿ ಜೊನಾಥನ್ ಮೆಕ್‌ಡೊವೆಲ್ ಅವರು ಚೀನಾ ಬಾಹ್ಯಾಕಾಶದಲ್ಲಿ ಬಿಟ್ಟ ಲಾಂಗ್ ಮಾರ್ಚ್ ರಾಕೆಟ್ ಈ ವಾರ ಭೂಮಿಯ ಮೇಲೆ ಎಲ್ಲೋ ಬೀಳುತ್ತದೆ ಎಂದು ಲೆಕ್ಕಾಚಾರ ಮಾಡಿದ್ದರು. ಈ ಬಾರಿ ಚೀನಾ ತನ್ನ ರಾಕೆಟ್‌ನ ನಿಯಂತ್ರಣ ಕಳೆದುಕೊಂಡಿದ್ದು ನಾಸಾದ ಗಗನಯಾತ್ರಿ ಹಾಕಿದ ಲೆಕ್ಕಾಚಾರದಂತೆ ರಾಕೆಟ್‌ ಅವಶೇಷಗಳು ಭೂಮಿಯನ್ನು ತಲುಪಿದೆ.

ಕಳೆದ ಮೂರು ವರ್ಷಗಳಲ್ಲಿ ಚೀನಾದ ರಾಕೆಟ್ ನಿಯಂತ್ರಣ ತಪ್ಪುವುದು ಇದು ಮೂರನೇ ಬಾರಿಯಾಗಿದೆ. ಮೂರು ಬಾರಿಯೂ ರಾಕೆಟ್‌ ಅವಶೇಷಗಳು ಸಮುದ್ರಕ್ಕೆ ಅಪ್ಪಳಿಸಿದೆ. ಮೇ 2021 ರಲ್ಲಿ, ಚೀನಾದ ರಾಕೆಟ್ ಮಾಲ್ಡೀವ್ಸ್ ಬಳಿ ಸಮುದ್ರದಲ್ಲಿ ಬಿದ್ದಿತು. ಅದಕ್ಕೂ ಮೊದಲು 2020 ರಲ್ಲಿ, ಚೀನಾದ ರಾಕೆಟ್ ಪಶ್ಚಿಮ ಆಫ್ರಿಕಾ ಮತ್ತು ಅಟ್ಲಾಂಟಿಕ್ ಸಾಗರದಲ್ಲಿ ಬಿದ್ದಿತ್ತು. ಲಾಂಗ್ ಮಾರ್ಚ್ ರಾಕೆಟ್ ಚೀನಾದ ಪ್ರಮುಖ ರಾಕೆಟ್ ಆಗಿದೆ. ಕಳೆದ ಮೂರು ವರ್ಷಗಳಿಂದ ಅದರ ನಿರಂತರ ವೈಫಲ್ಯವು ಆತಂಕಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News