ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ರಕ್ತದಾನ ಶಿಬಿರ, ಉಚಿತ ಕಣ್ಣು ತಪಾಸಣಾ ಶಿಬಿರ
ಮಂಗಳೂರು; ತಲಪಾಡಿ ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಹಾಗೂ ಎಸ್ಸೆಸ್ಸೆಫ್ ಯುನಿಟ್, ಫಾದರ್ ಮಲ್ಲರ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ 277ನೇ ರಕ್ತದಾನ ಹಾಗೂ ಕಣ್ಣಿನ ತಪಾಸಣೆ ಶಿಬಿರ ತಲಪಾಡಿ ಜಂಕ್ಷನ್ ನಲ್ಲಿ ರವಿವಾರ ನಡೆಯಿತು.
ನವಾಝ್ ಸಖಾಫಿ ದುವಾ ಮಾಡಿದರು. ಕೆಎಚ್ ಇಬ್ರಾಹಿಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ ಅಬ್ದುರ್ರಶೀದ್ ಝೈನಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಎಸ್ಜೆಎಮ್ ತಲಪಾಡಿ ರೇಂಜ್ ಅಧ್ಯಕ್ಷ ಅಬ್ದುಲ್ ಮದನಿ, ಕೆ ಸಿ ರೋಡ್ ಮಸೀದಿ ಅಧ್ಯಕ್ಷ ಕೆ ಬಿ ಯಹ್ಯಾ, ತಲಪಾಡಿ ಬಿಜೆಎಮ್ ಮಸೀದಿ ಅಧ್ಯಕ್ಷ ಯಾಕೂಬ್ ಪೂಮಣ್ಣು, ಎಸ್ ವೈ ಎಸ್ ಕೆಸಿ ರೋಡ್ ಸೆಂಟರ್ ಅಧ್ಯಕ್ಷ ಕೆ ಎಮ್ ಅಬ್ಬಾಸ್ ಹಾಜಿ, ಎಸ್ ಎಮ್ ಎ ತಲಪಾಡಿ ರೇಂಜ್ ಅಧ್ಯಕ್ಷ ಅಬ್ಬಾಸ್ ಕೊಲಂಗರ, ಕೆ ಎಮ್ ಫಾರೂಕ್ ಬಟ್ಟಪ್ಪಾಡಿ, ಹಮೀದ್ ತಲಪಾಡಿ, ಅನ್ವೀಝ್ ಕೆಸಿ ರೋಡ್, ಅಬೂಬಕರ್ ಕೆಎಮ್, ಅನ್ಸಾರ್ ಸಅದಿ, ಸಿರಾಜುದ್ದೀನ್ ಎ ಎಚ್, ಅಬ್ದುಲ್ ರಹಿಮಾನ್, ಮುಸ್ತಫಾ ಕೆ ಸಿ ನಗರ ಮುಂತಾದವರು ಉಪಸ್ಥಿತರಿದ್ದರು. ಅಸ್ಗರ್ ತಲಪಾಡಿ ಸ್ವಾಗತಿಸಿದರು.