ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್, ಕಾಮೆಂಟ್: ಮತ್ತೆ 12 ಪ್ರಕರಣಗಳು ದಾಖಲು
ಮಂಗಳೂರು, ಆ.1: ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಮತ್ತು ಕಾಮೆಂಟ್‌ಗಳ ವಿರುದ್ಧ ಕಟ್ಟುನಿಟ್ಟಿನ ನಿಗಾ ವಹಿಸಿರುವ ಮಂಗಳೂರು ಸೆನ್ ಪೊಲೀಸರು ಮತ್ತೆ 12 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದರೊಂದಿಗೆ ಈ ರೀತಿ ದಾಖಲಾದ ಪ್ರಕರಣಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಐದು ಪ್ರಕರಣಗಳು ದಾಖಲಾಗಿರುವ ಬಗ್ಗೆ ಪೊಲೀಸರು ರವಿವಾರ ಮಾಹಿತಿ ನೀಡಿದ್ದರು.
ಕರಾವಳಿಯಲ್ಲಿ ದೊಡ್ಡಮಟ್ಟದ ಕೋಮು ಸಂಘರ್ಷ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂಬುದಾಗಿ ರಾಜ್ಯ ಗುಪ್ತಚರ ದಳದ ಮಾಹಿತಿ ಎಂಬ ಸುಳ್ಳು ಸಂದೇಶ, ಪ್ರವೀಣ್ ಕೊಲೆಗೆ ಪ್ರತೀಕಾರವಾಗಿ ಕೊಲೆ ಮಾಡಲು ಕರೆ ನೀಡಿರುವ ಪೋಸ್ಟ್, 48 ಗಂಟೆಗಳಲ್ಲಿ ಪ್ರತೀಕಾರ ತೀರಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿರುವುದು, ಮಂಗಳೂರಿನಲ್ಲಿ ನಡೆದ ಒಂದು ಕೊಲೆಗೆ ಪ್ರತೀಕಾರವಾಗಿ 10 ಕೊಲೆ ಮಾಡುವುದಾಗಿ ಪೋಸ್ಟ್ ಹಾಕಿದ್ದು, ನಿರ್ದಿಷ್ಟ ಜಾತಿ ಮತ್ತು ಸಮುದಾಯವನ್ನು ಗುರಿಯಾಗಿಸಿಕೊಂಡು ಹತ್ಯೆಗೆ ಕರೆ ನೀಡುವ ಮೆಸೇಜ್ ಸಹಿತ ಫೇಸ್‌ಬುಕ್ ಪೋಸ್ಟ್/ ವಾಟ್ಸಪ್ ಗ್ರೂಪ್ ಚರ್ಚೆ ಮತ್ತು ಕಾಮೆಂಟ್ಸ್ ಅನ್ ದಿ ನ್ಯೂಸ್ ಕಾಲಂ, ಪ್ರಿಂಟ್ ಇಲೆಕ್ಟ್ರಾನಿಕ್ಸ್, ಯೂಟ್ಯೂಬ್, ಡಿಜಿಟಲ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ದಾಖಲಾದ ಪ್ರಕರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶ ಹರಿಯಬಿಡುತ್ತಿರುವವರ ಬಗ್ಗೆ ತೀವ್ರ ವಹಿಸಲಾಗಿದೆ. ಈ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಯಾವೆಲ್ಲ ವಿಚಾರಗಳಲ್ಲಿ ಪೋಸ್ಟ್, ಕಾಮೆಂಟ್ ಗಳಿಗೆ ಸಂಬಂಧಿಸಿ ಎಫ್.ಐ.ಆರ್. ದಾಖಲಾಗಿದೆ ಇಲ್ಲಿದೆ ಮಾಹಿತಿ...