×
Ad

ಉಳ್ಳಾಲ | ವ್ಯಕ್ತಿ ಆತ್ಮಹತ್ಯೆ

Update: 2022-08-01 16:14 IST

ಉಳ್ಳಾಲ, ಆ.1: ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಮಾಡೂರು ಕೊರಗಜ್ಜನ ಕಟ್ಟೆ ಬಳಿ ರವಿವಾರ ಸಂಜೆ ನಡೆದಿರುವುದು ವರದಿಯಾಗಿದೆ.

ಮಾಡೂರು ಕೊರಗಜ್ಜನ ಕಟ್ಟೆ ಬಳಿ ನಿವಾಸಿ ಕೃಷ್ಣ ನಾಯ್ಕ್(59) ಆತ್ಮಹತ್ಯೆ ಮಾಡಿಕೊಂಡವರು.

ಇವರು ರವಿವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದಿದ್ದ ವೇಳೆ ಮನೆಗೆ ತಾಗಿಕೊಂಡಿರುವ ಶೆಡ್ ನಲ್ಲಿ‌ ಮರದ ಪಕ್ಕಾಸಿಗೆ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದೆ.

ದೀರ್ಘ ಕಾಲದಿಂದ ಕಾಲು ನೋವಿನಿಂದ ಬಳಲುತ್ತಿದ್ದರೆನ್ನಲಾದ ಇವರು ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮನೆಮಂದಿ ಶಂಕೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News