ಆ.3ರಂದು ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ

Update: 2022-08-01 15:32 GMT

ಶಿರ್ವ : ಶಿರ್ವದ ಸಂತ ಮೇರಿ ಕಾಲೇಜಿನಲ್ಲಿ  ಆಗಸ್ಟ್ 3ರಂದು ಮಂಗಳೂರಿನ ಪ್ರತಿಷ್ಠಿತ  ಗ್ಲೋಟಚ್  ಟೆಕ್ನಾಲಜೀಸ್ ಸಂಸ್ಥೆ (ದಿಯಾ ಸಿಸ್ಟಮ್) ಯು ನೇರ ನೇಮಕಾತಿಗಾಗಿ ಕ್ಯಾಂಪಸ್ ಸಂದರ್ಶನವನ್ನು ನಡೆಸಲು ಉದ್ದೇಶಿಸಿದೆ.

ಈಗಾಗಲೇ ಬಿಸಿಎ, ಬಿಎಸ್ಸಿ (ಸಿಎಸ್, ಸ್ಟಾಟಿಸ್ಟಿಕ್ಸ್, ಎಲೆಕ್ಟ್ರಾನಿಕ್ಸ್), ಬಿಕಾಂ (ಕಂಪ್ಯೂಟರ್ ಅಪ್ಲಿಕೇಶನ್), ಡಿಪ್ಲೋಮಾ (ಸಿಎಸ್), ಎಂಎಸ್ಸಿ, ಎಂಸಿಎ, ಬಿಇ, ಬಿಟೆಕ್ ಮುಗಿಸಿರುವ ಅಭ್ಯರ್ಥಿಗಳಿಗೆ ಬೆಳಗ್ಗೆ 9.30ಕ್ಕೆ ಕಾಲೇಜಿನ ಫಾ. ಹೆನ್ರಿ ಕ್ಯಾಸ್ಟಲಿನೊ ಸಭಾಂಗಣದಲ್ಲಿ ಸಂದರ್ಶನ ನಡೆಯಲಿದೆ. 

ಅಭ್ಯರ್ಥಿಗಳು ಆಧಾರ್ ಕಾರ್ಡ್, ಮೂಲ ಅಂಕಪಟ್ಟಿ, ಪದವಿ ಪ್ರಮಾಣ ಪತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ   ದೂರವಾಣಿ ಸಂಖ್ಯೆ:೭೯೭೫೨೩೦೨೦೧, ೯೫೩೮೧೫೬೫೧೦, ೯೮೪೪೮೧೩೫೬೦ಗೆ ಸಂಪರ್ಕಿಸಬಹುದು  ಮತ್ತು ಈ ಕೆಳಗಿನ ಲಿಂಕಿನ ಮೂಲಕ - https://docs.google.com/forms/d/e/1FAIpQLSd4k21dThApOgqveAqLnn McP818iqixKplsMxGfmzpy0rRa1g/viewform- ಹೆಸರು ನೊಂದಾಯಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆರಾಲ್ಡ್ ಐವನ್ ಮೋನಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News