ಹಾವಂಜೆ: ದಶಾವತಾರ ತಾಳಮದ್ದಲೆ ಉದ್ಘಾಟನೆ

Update: 2022-08-01 15:34 GMT

ಉಡುಪಿ: ಬ್ರಹ್ಮಾವರ ಸಮೀಪದ ಹಾವಂಜೆಯ ಭಾವನಾ ಪ್ರತಿಷ್ಠಾನ ಸಂಯೋಜಿಸಿದ ಭಾಗವತ ಪುರಾಣಾಂತರ್ಗತ ದಶಾವತಾರ ಸರಣಿ ತಾಳಮದ್ದಳೆಯು ಶ್ರೀ ಮಹಾಲಿಂಗೇಶ್ವರ ಯಕ್ಷರಂಗ ಹಾವಂಜೆ ಹಾಗೂ ಅತಿಥಿ ಕಲಾವಿದರ ಕೂಡುಕೆಯಲ್ಲಿ ದೇವಸ್ಥಾನದ ವಠಾರದಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮವನ್ನು ಖ್ಯಾತ ವಿದ್ವಾಂಸರಾದ ಡಾ. ಪಾದೆಕಲ್ಲು ವಿಷ್ಣು ಭಟ್ಟ ಉದ್ಘಾಟಿಸಿದರು. ಅಲ್ಲದೇ ಸರಣಿಯ ಮೊದಲ ತಾಳಮದ್ದಳೆ ‘ಮತ್ಸ್ಯಾವತಾರ’ ದಲ್ಲಿ ಅವರು ವಿಷ್ಣುವಿನ ಪಾತ್ರವನ್ನು ನಿರ್ವಹಿಸಿದರು.

ಪ್ರಮುಖ ಅರ್ಥದಾರಿಗಳಾಗಿ ಪ್ರಸಂಗಕರ್ತ ಹಾವಂಜೆ ಮಂಜುನಾಥಯ್ಯ, ನಿರಂಜನ ಶರ್ಮ ನಿಟ್ಟೂರು, ಡಾ. ಗಣೇಶ್ ಭಟ್, ಸಚ್ಚಿದಾನಂದ ನಾಯಕ್ ಪಟ್ಲ, ಮಹೇಂದ್ರ ಆಚಾರ್ಯ ಹೆರಂಜೆ ಮೊದಲಾದವರು ಉಪಸ್ಥಿತರಿದ್ದರು. 

ಹಿಮ್ಮೇಳದಲ್ಲಿ ಭಾಗವತರಾಗಿ ಹರಿಕೃಷ್ಣ ಹೊಳ್ಳ, ಚಂದ್ರಯ್ಯ ಆಚಾರ್ಯ, ಮದ್ದಳೆಗಾರರಾಗಿ ರತ್ನಾಕರ ಆಚಾರ್ಯ ಹಾಗೂ ಚಂಡೆಯಲ್ಲಿ ಸುರೇಶ್ ಹೇರೂರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News