ಕಾನೂನು ಪದವೀಧರರು ನಾಗರಿಕ ಸೇವೆಯಲ್ಲಿ ಹೆಚ್ಚು ಪರಿಣಾಮಕಾರಿ: ಜಿಲ್ಲಾಧಿಕಾರಿ ಕೂರ್ಮಾರಾವ್

Update: 2022-08-01 15:39 GMT

ಉಡುಪಿ : ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಪದವಿಗೆ ಹೋಲಿಸಿದರೆ ಕಾನೂನು ಪದವೀಧರರು ನಾಗರಿಕ ಸೇವೆಗೆ ಸೇರುವುದರಿಂದ ಕಾಯಿದೆ ಕಾನೂನುಗಳ ಬಗ್ಗೆ ಜ್ಞಾನ ಇರುವ ಕಾರಣ ಪರಿಣಾಮಕಾರಿಯಾಗಿ ಕಾರ್ಯ ನಿರ್ವಸಲು ಸಹಾಯವಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅಭಿಪ್ರಾಯಪಟ್ಟಿದ್ದಾರೆ. 

ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ‘ಜಿಲ್ಲಾಡಳಿತದಲ್ಲಿ ವೃತ್ತಿ ಅವಕಾಶಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ನ್ಯಾಯಾಲಯವನ್ನು ಒಳ ಗೊಂಡಂತೆ ಇತರ ಅರೆ-ನ್ಯಾಯಿಕ ಪ್ರಾಧಿಕಾರ/ ನ್ಯಾಯಾಲಯಗಳ ಮುಂದೆ ನಡೆಯುವಂತಹ ಪ್ರಕರಣಗಳ ವಿಚಾರಣೆಗೆ ಸಿವಿಲ್ ಪ್ರಕ್ರಿಯಾ ಸಂಹಿತೆಯ ಉಪಬಂಧಗಳು ಅನ್ವಯಿಸದ ಕಾರಣ ವಕೀಲರು ಪ್ರಕರಣದ ವಸ್ತುಸ್ಥಿತಿ, ಸಂಬಂಧಿಸಿದ ಕಾನೂನಿನ ಉಪಬಂಧಗಳು ಹಾಗೂ ಪೂರ್ವ ನಿರ್ಣಯಗಳ ಸಾರಾಂಶದ ವಿವರವನ್ನು ಸಂಕ್ಷಿಪ್ತವಾಗಿ ಪ್ರಸ್ತುತ ಪಡಿಸುವುದು ಸಾಧ್ಯವಾಗುತ್ತದೆ ಎಂದು ಹೇಳಿದರು. 

ಕಾನೂನು ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿ ಜೀವನದಲ್ಲಿ ಕಷ್ಟದಲ್ಲಿರುವ ಹಾಗೂ ನೊಂದವರ ಪರ ನ್ಯಾಯಕ್ಕಾಗಿ ಹೋರಾಡುವ ಅವಕಾಶವಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸದಲ್ಲಿ ತೊಡಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.(ಡಾ.)ನಿರ್ಮಲ ಕುಮಾರಿ ಕೆ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ರಘುನಾಥ ಕೆ.ಎಸ್, ಪ್ಲೇಸ್‌ಮೆಂಟ್ ಘಟಕದ ಸಂಯೋಜಕಿ ಪ್ರೀತಿ ಹರೀಶ್‌ ರಾಜ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವನುಹಾ ವಿಕ್ಟರ್ ಸ್ವಾಗತಿಸಿ, ನಾಗರಾಜ್ ಹೆಗ್ಡೆ ವಂದಿಸಿದರು. ಹರ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News