‘‘ಗುಜರಾತಿ-ರಾಜಸ್ಥಾನಿ ಹೇಳಿಕೆ’’ ಕ್ಷಮೆ ಕೋರಿದ ಮಹಾರಾಷ್ಟ್ರ ರಾಜ್ಯಪಾಲ
Update: 2022-08-01 23:35 IST
ಹೊಸದಿಲ್ಲಿ, ಆ. 1: ಎಲ್ಲಾ ರಾಜಕೀಯ ಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾದ ಬಳಿಕ ಮಹಾರಾಷ್ಟ್ರ ರಾಜ್ಯಪಾಲ ಬಿ.ಎಸ್. ಕೋಶಿಯಾರಿ ಅವರು ತನ್ನ ‘‘ಗುಜರಾತಿ-ರಾಜಸ್ಥಾನಿ’’ ಹೇಳಿಕೆಗೆ ಸೋಮವಾರ ಕ್ಷಮೆ ಕೋರಿದ್ದಾರೆ.
ಮಹಾರಾಷ್ಟ್ರದಿಂದ ಗುಜರಾತಿ ಹಾಗೂ ರಾಜಸ್ಥಾನಿಗಳು ಹೊರತೆಗೆದರೆ, ರಾಜ್ಯದಲ್ಲಿ ಹಣ ಉಳಿಯಲಾರದು ಎಂದು ಕಳೆದ ವಾರ ತನ್ನ ಭಾಷಣವೊಂದರಲ್ಲಿ ಹೇಳಿಕೆ ನೀಡುವ ಮೂಲಕ ಕೋಶಿಯಾರಿ ಅವರು ವಿವಾದಕ್ಕೆ ಕಾರಣವಾಗಿದ್ದರು.
‘‘ಮಹಾರಾಷ್ಟ್ರದಿಂದ ಮುಖ್ಯವಾಗಿ ಮುಂಬೈ ಹಾಗೂ ಥಾಣೆಯಿಂದ ಗುಜರಾತಿ ಹಾಗೂ ರಾಜಸ್ಥಾನಿಗಳನ್ನು ಹೊರತೆಗೆದರೆ, ಇಲ್ಲಿ ಯಾವುದೇ ಹಣ ಉಳಿಯಲಾರದು. ಮುಂಬೈ ದೇಶದ ಆರ್ಥಿಕ ರಾಜಧಾನಿಯಾಗುವುದಕ್ಕೆ ಸಾಧ್ಯವಾಗಲಾರದು’’ ಎಂದು ಮಹಾರಾಷ್ಟ್ರ ರಾಜ್ಯಪಾಲರು ಹೇಳಿದ್ದಾರೆ.
ಈ ಹೇಳಿಕೆ ಕುರಿತಂತೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೋಶಿಯಾರಿ ಅವರು ಸೋಮವಾರ ಟ್ವೀಟ್‌ನಲ್ಲಿ ಮರಾಠಿಯಲ್ಲಿ ಕ್ಷಮೆ ಕೋರಿದ್ದಾರೆ.