×
Ad

ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ಮುತಾಲ್ಲಿ ನೇಮಕ

Update: 2022-08-02 17:01 IST

ಉಡುಪಿ, ಆ.2: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಆದೇಶದಂತೆ ಉಡುಪಿ ಜಿಲ್ಲೆಗೆ ನೂತನವಾಗಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ರಚನೆಯಾಗಿದ್ದು, ಸಮಿತಿಯ ಅಧ್ಯಕ್ಷರಾಗಿ ಸಿ.ಎಚ್.ಅಬ್ದುಲ್ ಮುತಾಲ್ಲಿ ಅವರನ್ನು ನೇಮಕ ಮಾಡಲಾಗಿದೆ.

ಅಧ್ಯಕ್ಷರೊಂದಿಗೆ ಎಂಟು ಉಪಾಧ್ಯಕ್ಷರುಗಳು ಮತ್ತು 12 ಸದಸ್ಯರುಗಳ ಸಲಹಾ ಸಮಿತಿಯನ್ನು ರಚಿಸಲಾಗಿದೆ. ನೂತನ ಅಧ್ಯಕ್ಷರು ಆ.2ರಂದು ಜಿಲ್ಲಾ ವಕ್ಫ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರುಗಳಾದ ಮುಹಮ್ಮದ್ ಅಬ್ದುಲ್ ಸುಬ್ಹಾನ್, ಬದ್ರುದ್ದೀನ್ ತೌಫೀಖ್, ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ, ಅಫ್ಸರ್ ಉಚ್ಚಿಲ, ಸದಸ್ಯರುಗಳಾದ ಶೇಖ್ ಆಸೀಫ್ ಕಟಪಾಡಿ, ಜುನೈದ್ ಉಡುಪಿ, ಆದಮ್ ಸಾಹೇಬ್, ಅಬೂಬಕ್ಕರ್ ಹಸನಾರ್, ಸುಬ್ಹಾನ್ ಹೊನ್ನಾಳ, ಅಬ್ದುಲ್ಲಾ ಹಾಗೂ ಜಿಲ್ಲಾ ವಕ್ಫ್ ಅಧಿಕಾರಿ ಎಂ.ಅಬೂಬಕ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News