ಗುರುಪುರ: ‘ಗ್ರಾಮ ಚದುರಂಗ ಆಡೋಣ ಅಭಿಯಾನ’ ಕಾರ್ಯಕ್ರಮ
Update: 2022-08-02 19:14 IST
ಮಂಗಳೂರು, ಆ. 2: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಪರಿಚಯಿಸಿರುವ ‘ಓದುವ ಬೆಳಕು’ ಕಾರ್ಯಕ್ರಮದಡಿ ‘ಗ್ರಾಮ ಚದುರಂಗ (ಚೆಸ್) ಆಡೋಣ ಅಭಿಯಾನ’ ಕಾರ್ಯಕ್ರಮವು ಗುರುಪುರ ಗ್ರಾಪಂ ಸಭಾಭವನದಲ್ಲಿ ಸೋಮವಾರ ಪ್ರಾಥಮಿಕ ಮತ್ತು ಹೈಸ್ಕೂಲ್ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆಯಿತು.
ಗ್ರಾಪಂ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು. ಪಿಡಿಒ ಅಬೂಬಕ್ಕರ್, ಗ್ರಾಪಂ ಉಪಾಧ್ಯಕ್ಷೆ ದಿಲ್ಶಾದ್, ಸದಸ್ಯರಾದ ಜಿ.ಎಂ.ಉದಯ ಭಟ್, ಸಚಿನ್ ಅಡಪ, ಬುಶ್ರಾ, ಕಾರ್ಯದರ್ಶಿ ಅಶೋಕ್, ಪಂದ್ಯಾಟ ನಿರ್ವಾಹಕರಾದ ಸುದರ್ಶನ್, ಅಶ್ವಿತಾ, ಇರ್ಶಾದ್ ಮತ್ತಿತರರು ಉಪಸ್ಥಿತರಿದ್ದರು.