ಬಹುಧರ್ಮೀಯ ಪ್ರಾರ್ಥನೆ ವಿರುದ್ಧ ಸಂಘಪರಿವಾರದ ಕೆಂಗಣ್ಣು: ಕಾನ್ಪುರದ ಶಾಲೆಯ ವಿರುದ್ಧ ಎಫ್ಐಆರ್ ದಾಖಲು

Update: 2022-08-02 16:55 GMT

ಹೊಸದಿಲ್ಲಿ, ಆ.2: ಕಾನ್ಪುರದ ಫ್ಲೋರೆಟ್ಸ್ ಇಂಟರ್ನ್ಯಾಶನಲ್ ಸ್ಕೂಲ್ ನ ನಿರ್ದೇಶಕರ ವಿರುದ್ದ ಉತ್ತರಪ್ರದೇಶ ಪೊಲೀಸರ ಬಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 295ಎ ಹಾಊ ಉತ್ತರಪ್ರದೇಶದ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ 2021 ಅನ್ವಯ ಪ್ರಕರಣ ದಾಖಲಿಸಲಾಗಿದೆ. ಈ ಶಾಲೆಯಲ್ಲಿ ಬಹುಧರ್ಮೀಯ ಆರಾಧನೆಯ ಭಾಗವಾಗಿ ವಿದ್ಯಾರ್ಥಿಗಳಿಗೆ ಇಸ್ಲಾಮಮಿಕ್ ಪ್ರಾರ್ಥನೆಗಳನ್ನು ಪಠಿಸುವುದರ ವಿರುದ್ಧ ಹಿಂದುತ್ವವಾದಿ ಕಾರ್ಯಕರ್ತರು ನೀಡಿದ ದೂರಿನ ಮೇಲೆರೆ ಕಾನ್ಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಹಿಂದುತ್ವವಾದಿ ಕಾರ್ಯಕರ್ತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಶಾಲೆಯನ್ನು ಸತತವಾಗಿ ಎರಡು ದಿನಗಳ ಕಾಲ ಮುಚ್ಚಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಶಾಲಾಡಳಿತದ ವಿರುದ್ಧ ಆಗಸ್ಟ್ 1ರಂದು ಎಫ್ಐಆರ್ ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆಯೆಂದು ಸಹಾಯಕ ಪೊಲೀಸ್ ಆಯುಕ್ತ ನಿಶಾಂಕ್ ಶರ್ಮಾ ತಿಳಿಸಿದ್ದಾರೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಮತಾಂತರಿಸುವ ಯತ್ನ ನಡೆಯುತ್ತಿದೆಯೆಂದು ಕಾನ್ಪುರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಸಂಘಪರಿವಾರದ ಬೆಂಬಲಿಗರು ದೂರು ನೀಡಿದ್ದರು.

ಶಾಲೆಯ ವಿದ್ಯಾರ್ಥಿಗಳಿಂದ ಇಸ್ಲಾಮಿಕ್ ಪ್ರಾರ್ಥನೆಗಳನ್ನು ಪಠಣವನ್ನು ಮಾಡಿಸಲಾಗುತ್ತಿದ್ದು ಇದೊಂದು ಶಿಕ್ಷಣ ಜಿಹಾದ್ ಆಗಿದೆಯೆಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಆದರೆ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿರುವ ಪ್ರಾರ್ಥನಾ ಪುಸ್ತಕದಲ್ಲಿ ಗಾಯತ್ರಿ ಮಂತ್ರ, ಸಾಂಚಿ ವಾಣಿ ಹಾಗೂ ನಾವೆಲ್ಲಾ ಭಾರತದ ಪ್ರಜೆಗಳೆಂಬ ಪ್ರತಿಜ್ಞಾವಿಧಿ ಕೂಡಾ ಇತ್ತೆಂದು ದಿ ವೈರ್ನ ವರದಿ ತಿಳಿಸಿದೆ.

    

 ಫ್ಲೋರೆಟ್ಸ್ ಶಾಲೆಯ  ಪ್ರಾಂಶುಪಾಲೆ ಶ್ರದ್ಧಾ ಶರ್ಮಾ ಅವರು ಬಹುಧರ್ಮೀಯ ಪ್ರಾರ್ಥನೆಗಳನ್ನು ಶಾಲೆಯು 2003ರಲ್ಲಿ ಆರಂಭವಾದಾಗಿನಿಂದಲೂ ಬೆಳಗ್ಗಿನ ಅಸೆಂಬ್ಲಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ. ಆದರೆ ಅದರಲ್ಲಿ ಇಸ್ಲಾಮಿ ಪ್ರಾರ್ಥನೆಗಳನ್ನು ಅಳವಡಿಸಿರುವುದಕ್ತಕೆ ಕೆಲವು ಪಾಲಕರಿಂದ ಆಕ್ಷೇಪಗಳನ್ನೆತ್ತಿದ ಬಳಿಕ ಶಾಲಾಡಳಿತವು ರಾಷ್ಟ್ರಗೀತೆಯನ್ನು ಮಾತ್ರ ವಿದ್ಯಾರ್ಥಿಗಳಿಂದ ಹಾಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

‘‘ನಾವು ಎಲ್ಲಾ ಧರ್ಮಗಳ ಪ್ರಾರ್ಥನೆಗಳನ್ನು ಅನುಸರಿಸುತ್ತಿದ್ದೇವೆಯೇ ಹೊರತು ಕೇವಲ ಒಂದೇ ಧರ್ಮದ್ದಲ್ಲ. ಈ ಪರಿಪಾಠವು ಕಳೆದ 12-13 ವರ್ಷಗಳಿಂದ ನಡೆದು ಬರುತ್ತಿದೆ ಎಂದು ಮೀರಾ ಗುಪ್ತಾ ತಿಳಿಸಿದ್ದಾರೆ. ಈ ಮಧ್ಯೆ ಫ್ಲೋರೆಟ್ಸ್ ಶಾಲೆಯನ್ನು ಹಾಗೂ ಸಹಶಾಖೆಗಳನ್ನು ಶಾಶ್ವತವಾಗಿ ಮುಚ್ಚುಗಡೆಗೊಳಿಸೆಬೇಕೆಂದು ವಿಶ್ವಹಿಂದೂ ಪರಿಷದ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News