ತೆರಿಗೆ ವಂಚನೆ: ಮೂರು ಚೀನಿ ಮೊಬೈಲ್ ಕಂಪೆನಿಗಳಿಗೆ ಕೇಂದ್ರದ ನೋಟಿಸ್

Update: 2022-08-02 17:07 GMT

ಹೊಸದಿಲ್ಲಿ,ಆ.2:ಚೀನಾದ ಮೂರು ಮೊಬೈಲ್ ಕಂಪೆನಿಗಳ ವಿರುದ್ಧ ದಾಖಲಿಸಲಾದ ತೆರಿಗೆಗಳ್ಳತನ ಪ್ರಕರಣಗಳ ಬಗ್ಗೆ ಕೇಂದ್ರ ಸರಕಾರವು ತನಿಖೆ ನಜೆಸುತ್ತಿದೆಯೆಂದು ಹಾಗೂ ಅವುಗಳಿಗೆ ನೋಟಿಸ್ ನೀಡಲಾಗಿದೆಯೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ರಾಜ್ಯಸಭಾಗೆ ಮಾಹಿತಿ ನೀಡಿದರು.

 ಪ್ರಶ್ನೋತ್ತರ ವೇಳೆಯಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಚೀನಾ ಮೂಲದ ಒಪ್ಪೊ, ವಿವೋ ಇಂಡಿಯಾ ಹಾಗೂ ಶಿವೊಮಿ ಕಂಪೆನಿಗಳ ವಿರುದ್ಧ ತೆರಿಗೆಗಳ್ಳತನದ ಆರೋಪ ದಾಖಲಿಸಲಾಗಿದೆ ಎಂದರು.

ಕಂದಾಯ ಗುಪ್ತಚರ ಇಲಾಖೆ (ಡಿಆರ್ಐ)   ಯು ಒಪ್ಪೊ ಮೊಬೈಲ್ ಕಂಪೆನಿಯ ವಿರುದ್ಧ 4389 ಕಸ್ಟಮ್ಸ್ ತೆರಿಗೆಯನ್ನು ಪಾವತಿಸದೆ ಇರುವುದಕ್ಕಾಗಿ ನೋಟಿಸ್ ಜಾರಿಗೊಳಿಸಿದೆ. ಕೆಲವು ನಿರ್ದಿಷ್ಟ ಸಾಮಾಗ್ರಿಗಳ ಬಗ್ಗೆ ತಪ್ಪು ಘೋಷಣೆ ನೀಡುವ ಮೂಲಕ ಒಪ್ಪೊ ಕಂಪೆನಿಯು ಸುಮಾರು 2981 ಕೋಟಿ ರೂ. ಮೊತ್ತದ ತೆರಿಗೆ ಪಾವತಿಯನ್ನು ತಪ್ಪಿಸಿಕೊಂಡಿದೆ ಎಂದರು.

ಕಸ್ಟಮ್ಸ್ ಸುಂಕದ ಪಾವತಿಯ ಉದ್ದೇಶದಿಂದ ಆಮದಿತ ವಸ್ತುಗಳ ವೌಲ್ಯವನ್ನು ಕಡಿಮೆಯಾಗಿ ತೋರಿಸುವ ಮೂಲಕ 1408 ಕೋಟಿ ರೂ. ಮೊತ್ತದ ತೆರಿಗೆ ಪಾವತಿಯನ್ನು ತಪ್ಪಿಸಿಕೊಳ್ಳಲಾಗಿದೆ

ಹೀಗೆ 4189 ಕೋಟಿ ರೂ. ತೆರಿಗೆಯನ್ನು ವಂಚಿಸಿದ್ದರೂ, ಒಪ್ಪೊ ಕಂಪೆನಿಯು ಸ್ವಯಂಪ್ರೇರಿತವಾಗಿ 450 ಕೋಟಿ ರೂ. ಠೇವಣಿ ಇಡಲು ಮುಂದೆ ಬಂದಿತ್ತು. ಶಿಯೊಮಿ ಮೊಬೈಲ್ ಕಂಪೆನಿಯು 653 ಕೋಟಿ ರೂ. ಕಸ್ಟಮ್ಸ್ ತೆರಿಗೆಯನ್ನು ಬಾಕಿಯಿರಿಸಿದೆ. ಅದಕ್ಕೆ ಮೂರು ಶೋಕಾಸ್ ನೋಟಿಸ್ಗಳನ್ನು ಜಾರಿಗೊಳಿಸಿದ ಬಳಿಕವೂ , ಅದು ಕೇವಲ 46 ಲಕ್ಷ ವನ್ನು ಮಾತ್ರ ಠೇವಣಿಯಿರಿಸಿದೆ’’ ಎಂದು ಸೀತಾರಾಮನ್ ಹೇಳಿದರು.

 ಇನ್ನೊಂದು ಚೀನಿ ಮೂಲದ ಮೊಬೈಲ್ ಕಂಪೆನಿಯಾದ ವಿವೊ ಇಂಡಿಯಾಕ್ಕೆ 2217 ಕೋಟಿ ರೂ. ಮೊತ್ತದ ಕಸ್ಟಮ್ಸ್ ತೆರಿಗೆ ಪಾವತಿಸಲು ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ ಕೇವಲ 60 ಕೋಟಿ ರೂ. ಠೇವಣಿಯನ್ನು ಮಾತ್ರವೇ ಇರಿಸಿದೆ ಎಂದು ಸಚಿವೆ ತಿಳಿಸಿದರು.

ಇದರ ಜೊತೆಗೆ ಜಾರಿ ನಿರ್ದೇಶನಾಲಯವು ವಿವಿ ಕಂಪೆನಿಯು ಸ್ಥಾಪಿಸಿದ 18 ಕಂಪೆನಿಗಳ ತೆರಿಗೆಗಳ್ಳತನದ ಬಗ್ಗೆಯೂ ತನಿಖೆ ನಡೆಸಿದ್ದು,ಅ ವು 62 ಕೋಟಿ ರೂ. ಠೇವಣಿಯಿರಿಸಿದೆ. ಇದರ ಹೊರತಾಗಿಯೂ ಪೋಷಕ ಕಂಪೆನಿಯಾದ ವಿವೊ ಭಾರತದಲ್ಲಿ 1.25 ಲಕ್ಷ ಕೋಟಿ ಮೊತ್ತದ ಸಾಮಾಗ್ರಿಗಳನ್ನು ಮಾರಾಟ ಮಾಡಿದೆ ಎಂದು ಸೀತಾರಾಮನ್ ಸದನಕ್ಕೆ ತಿಳಿಸಿದರು.

ಈ 1.25 ಲಕ್ಷ ಕೋಟಿ ರೂ. ಮೊತ್ತದ ಮಾರಾಟದ ಬಂದ ಆದಾಯವನ್ನು ಈ 18 ಕಂಪೆನಿಗಳಿಗೆ ವರ್ಗಾಯಿಸಿದೆ. ಆದರಲ್ಲಿ 0.62 ಲಕ್ಷ ಕೋಟಿಯನ್ನು ಭಾರತದ ಹೊರಗಿರುವ ಪೋಷಕ ಕಂಪೆನಿಗೆ ಅದು ಪಾವತಿಸಿದೆ ಎಂದು ಸೀತಾರಾಮನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News